ಮೇ.16: ವಿದ್ಯುತ್ ನಿಲುಗಡೆ

0

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕಬಕ, ನಗರ ಮತ್ತು ಬಲ್ನಾಡು (ಕೆದಿಲ) ನಲ್ಲಿ ಮೇ.16 ರಂದು ಪೂರ್ವಾಹ್ನ 09:30 ರಿಂದ ಅಪರಾಹ್ನ 05:30 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಆದುದರಿಂದ, 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕಲ್ಲೇಗ, ನಗರ ಜಂಕ್ಷನ್, ಕಬಕ, ಮುರ, ವಿದ್ಯಾಪುರ, ರಕ್ತೇಶ್ವರಿ ವಠಾರ, ಶೇವಿರೆ, ಮಂಜಲ್ಪಡ್ಪು, ಕೆ.ಎಂ. ಸ್ಟೋರ್, ಉರ್ಲಾಂಡಿ, ಬಪ್ಪಳಿಗೆ, ವಿವೇಕಾನಂದ ಕಾಲೇಜು, ಪಡ್ಡಾಯೂರು, ಪೆರಿಯತ್ತೋಡಿ, ಗಣೇಶ್ ಭಾಗ್, ಸನ್ನಿಧಿ ಲೇಔಟ್, ನವನಗರ, ಕಾರ್ಜಾಲು, ಚನಿಲ ಮತ್ತು ಕಪ್ಪೆಕೆರೆ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here