






ಪುತ್ತೂರು: ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಯೋಜನೆಯಡಿ ಕೇಂದ್ರ ಯೋಜನಾ ಆಯೋಗದ ಮುಖಾಂತರ ಭಾರತ್ ಸೇವಕ್ ಸಮಾಜ್ ಃSS ಸುಮಾರು 500ಕ್ಕಿಂತಲೂ ಹೆಚ್ಚು ಅಲ್ಪಾವಧಿಯ ವೃತ್ತಿಪರ ಕೋರ್ಸ್ಗಳನ್ನು ನಡೆಸುತ್ತಿದ್ದು ಅದರಲ್ಲಿ ಆಒಇಆ ಕೋರ್ಸ್ ಒಂದಾಗಿದೆ.ಈ ತರಬೇತಿಯು ಒಂದು ವರ್ಷ ಅವಧಿಯದ್ದಾಗಿದೆ.




ಎಸ್.ಎಸ್.ಎಲ್.ಸಿ, ಪಿಯುಸಿ ಇನ್ನಿತರ ಅರ್ಹತೆಯನ್ನು ಪಡೆದಂತಹ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಈ ಶಿಕ್ಷಕಿ ತರಬೇತಿಯನ್ನು ಪಡೆಯಬಹುದಾಗಿದೆ. ಈ ತರಬೇತಿಗೆ ದೇಶ ವಿದೇಶಗಳಲ್ಲಿ ಬಹು ಬೇಡಿಕೆಯಿದೆ. ಆಸಕ್ತರು ಸ್ವತಃ ಬೇಬಿ ಸಿಟ್ಟಿಂಗ್,ಡೇಕ್ಯಾರ್ ಸೆಂಟರ್,ನರ್ಸರಿ ಶಾಲೆಗಳನ್ನೂ ತೆರೆಯಬಹುದಾಗಿದೆ.
ಕಳೆದ 26 ವರ್ಷಗಳಿಂದ ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಈಶ ವಿದ್ಯಾಲಯವು 2001 ರಿಂದ DMED ತರಬೇತಿಯನ್ನು ನಡೆಸುತ್ತಿದ್ದು ಇದುವರೆಗೆ 25 ಬ್ಯಾಚುಗಳನ್ನು ಶೇಕಡಾ 100 ಫಲಿತಾಂಶದೊಂದಿಗೆ ಯಶಸ್ವಿಯಾಗಿ ಪೂರೈಸಿದೆ. DMED ತರಬೇತಿಯನ್ನು ಪೂರೈಸಿದ ವಿದ್ಯಾರ್ಥಿನಿಯರಿಗೆ ಕೇಂದ್ರ ಸರಕಾರ ಕೊಡಮಾಡುವ ಸರ್ಟಿಫಿಕೇಟನ್ನು ನೀಡಲಾಗುತ್ತದೆ. ಇದರ ಆಧಾರದಲ್ಲಿ ಭಾರತದಾದ್ಯಂತ ಮತ್ತು ವಿಶ್ವದಾದ್ಯಂತ ಯಾವುದೇ ಪೂರ್ವ, ಪ್ರಾಥಮಿಕ ಶಾಲೆಗಳಲ್ಲಿ ಕೆಲಸವನ್ನು ನಿರ್ವಹಿಸಬಹುದಾಗಿದೆ.



ತರಬೇತಿಯ ಅವಧಿಯಲ್ಲಿ ನಿತ್ಯ ತರಗತಿಗಳು ಅಲ್ಲದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕ್ರಿಯಾಶೀಲ ಚಟುವಟಿಕೆಗಳು ,ವಿವಿಧ ತರಬೇತಿಗಳು ,ಒಂದು ವರ್ಷದ ಉಚಿತ ಕಂಪ್ಯೂಟರ್ PGDCA ತರಬೇತಿ ಹಾಗೂ ssSPOKEN ENGLISH ತರಬೇತಿ, 4 ದಿನಗಳ ಸಹವಾಸ ವಿಶೇಷ ಶಿಬಿರ (camp),RHYMES & STORIES, ART & CRAFT, ಕಾರ್ಯಕ್ರಮ ಸಂಯೋಜನೆ,ಮನೋವಿಕಾಸ ಆಟಗಳು ,ಸಂದರ್ಶನ ಎದುರಿಸುವ ಬಗ್ಗೆ ತರಬೇತಿ, ಟೀಚಿಂಗ್ ಪ್ರಾಕ್ಟೀಸ್ , ಕಮ್ಯೂನಿಟಿ ವರ್ಕ್ ,ಶಾಲಾ ಶೈಕ್ಷಣಿಕ ಪ್ರವಾಸ ಅಲ್ಲದೆ ಕಲೆ, ಕ್ರೀಡೆ,ಸಾಹಿತ್ಯ ,ಸಮಾಜಸೇವೆಯನ್ನು ಒಳಗೊಂಡ ವಿಶೇಷ ತರಬೇತಿಗಳು ನಡೆಯುತ್ತಿದ್ದು , ಸಂಸ್ಥೆಯಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿನಿಯರು ದೇಶ ವಿದೇಶಗಳಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿತ್ತಿದ್ದಾರೆ. ಆಸಕ್ತ ವಿದ್ಯಾರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ.ಹಾಗೂ ವಿವಿಧ ಶಾಲೆಗಳಲ್ಲಿ 100% ಉದ್ಯೋಗಾವಕಾಶ
ಕಳೆದ 23 ವರ್ಷಗಳಿಂದ ಮಾಡಿಕೊಡಲಾಗುತ್ತದೆ.
2024-25 ನೇ ಶೈಕ್ಷಣಿಕ ವರ್ಷದಲ್ಲಿ ತರಗತಿಗೆ ಹಾಜರಾದ 26 ವಿದ್ಯಾರ್ಥಿನಿಯರಲ್ಲಿ 25 ವಿದ್ಯಾರ್ಥಿನಿಯರಿಗೆ ಪರೀಕ್ಷೆ ಬರೆಯುವ ಮೊದಲೇ ಹಾಗೂ 2025-26 ನೇ ಶೈಕ್ಷಣಿಕ ವರ್ಷದಲ್ಲಿ 40 ವಿದ್ಯಾರ್ಥಿನಿಯರಲ್ಲಿ 29 ವಿದ್ಯಾರ್ಥಿನಿಯರೂ ವಿವಿಧ ಶಾಲೆಗಳಲ್ಲಿ ಶಿಕ್ಷಕರಾಗಿ ನೇಮಕಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ.
ಆಸಕ್ತರಿಗೆ ವಾರದ ಎಲ್ಲಾ ದಿನಗಳಲ್ಲಿ, ಉದ್ಯೋಗಸ್ಥರಿಗೆ ಶನಿವಾರ ಅಪರಾಹ್ನ, ಆದಿತ್ಯವಾರ, ಸರ್ಕಾರಿ ರಜಾ ದಿನಗಳಂದು, ದೂರದ ವಿದ್ಯಾರ್ಥಿನಿಯರಿಗೆ ಪಿ.ಜಿ ವ್ಯವಸ್ಥೆಯೊಂದಿಗೆ ಆನ್ ಲೈನ್, ಆಫ್ ಲೈನ್ ತರಬೇತಿ ಲಭ್ಯವಿದೆ.
ಆಸಕ್ತರು ಕೂಡಲೇ ದಾಖಲಾತಿಗಾಗಿ ಈಶ ವಿದ್ಯಾಲಯವನ್ನು ಸಂಪರ್ಕಿಸಬಹುದಾಗಿದೆ.
ಸೀಮಿತ ಸೀಟುಗಳು ಲಭ್ಯವಿದ್ದು ಕೂಡಲೇ ಸಂಸ್ಥೆ ಅಥವಾ ದೂರವಾಣಿ ಸಂಖ್ಯೆ 8722293944, 9448153379 ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.









