ಉಪ್ಪಿನಂಗಡಿ : ಭಾರೀ ಮಳೆಗೆ ಅವಾಂತರ

0

ಉಪ್ಪಿನಂಗಡಿ : ಶನಿವಾರ ಸಾಯಂಕಾಲ ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲ ಪ್ರದೇಶದಲ್ಲಿ ಭಾರೀ ಮಳೆಯಾಗಿದ್ದು, ಸಿಡಿಲಬ್ಬರದಿಂದ ಗಾಳಿ ಮಳೆ ಸುರಿದಿದೆ.
ಭಾರೀ ಮಳೆಯಿಂದಾಗಿ ಹಲವೆಡೆ ಚರಂಡಿಗಳಲ್ಲಿ ಸರಾಗವಾಗಿ ಮಳೆ ನೀರು ಹರಿಯದೆ ರಸ್ತೆ ತುಂಬಾ ನೀರು ನಿಂತು ಸಮಸ್ಯೆಯನ್ನು ಸೃಷ್ಠಿಸಿದೆ. ಕರ್ವೇಲು ಎಂಬಲ್ಲಿ ಹೆದ್ದಾರಿ ಕಾಮಗಾರಿಯ ಅಪೂರ್ಣತೆಯಿಂದಾಗಿ ಚರಂಡಿ ನೀರು ಭಾರೀ ಪ್ರಮಾಣದಲ್ಲಿ ಮನೆಯೊಂದಕ್ಕೆ ನುಗ್ಗಿ ಅವಾಂತರ ಸೃಷ್ಠಿಸಿದೆ.


ಇತ್ತ ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯ ಎರಡೂ ಪಾರ್ಶ್ವದಲ್ಲಿ ಮಣ್ಣು ತುಂಬಿ ನೀರು ಹರಿದು ಹೋಗುವ ರಂದ್ರಗಳು ಮುಚ್ಚಿ ಹೋಗ್ಗಿದರಿಂದ ಸೇತುವೆಯು ಕಂಬಳ ಕರೆಯಂತಾಗಿ ವಾಹನ ಸಂಚಾರದ ವೇಳೆ ನೀರು ಚಿಮ್ಮಲ್ಪಟ್ಟು ಸಮಸ್ಯೆಯುಂಟಾಗಿತ್ತು. ಈ ವೇಳೆ ಸಮಸ್ಯೆಯ ತೀವ್ರತೆಯನ್ನು ಕಂಡ್ ಐಳಮ್ತಿಲ ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯ ಯು ಕೆ ಇಸುಬು ನೇತೃತ್ವದ ಯುವಕರ ತಂಡ ಸಲಕರಣೆಗಳೊಂದಿಗೆ ಕಾರ್ಯಾಚರಣೆ ನಡೆಸಿ ರಂದ್ರಗಳಲ್ಲಿ ತುಂಬಿ ಹೋಗಿದ್ದ ಮಣ್ಣನ್ನು ತೆರವುಗೊಳಿಸಿ ಸೇತುವೆಯನ್ನು ನೀರಿನಿಂದ ಮುಕ್ತಗೊಳಿಸುವ ಕಾರ್ಯ ನಡೆಸಿದರು. ತನ್ಮೂಲಕ ಸಾರ್ವಜನಿಕರಿಗೆ ಅನುಕೂಲತೆಯನ್ನು ಸೃಷ್ಠಿಸಿದರು. ಶನಿವಾರದ ಮಳೆಯಿಂದಾಗಿ ಕರಾಯ ಸಮೀಪ ವಿದ್ಯುತ್ ಕಂಬ ಹಾನಿಗೀಡಾಗಿದ್ದು , ಪರಿಸರದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.

LEAVE A REPLY

Please enter your comment!
Please enter your name here