







ಕೇಂದ್ರದ ವೈಫಲ್ಯವನ್ನು ಜನತೆಗೆ ತಿಳಿಸುವ ಉದ್ದೇಶ-ಅಶೋಕ್ ರೈ


ಪುತ್ತೂರು:ಕೇಂದ್ರ ಸರಕಾರದ ಬೆಲೆ ಏರಿಕೆ ನೀತಿ ಮತ್ತು ಆಡಳಿತ ವೈಫಲ್ಯವನ್ನು ಖಂಡಿಸಿ ಮೇ.18ರಂದು ಪುತ್ತೂರು ಬಸ್ ನಿಲ್ದಾಣದ ಬಳಿ ಗಾಂಧಿಕಟ್ಟೆಯ ಎದುರು ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.



ಪುತ್ತೂರು ಪ್ರವಾಸಿ ಮಂದಿರದಲ್ಲಿ ಮೇ .16ರಂದು ಶಾಸಕರು ಪುತ್ತೂರು, ವಿಟ್ಲ ಮತ್ತು ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಮುಖರ ಜೊತೆ ಪ್ರತಿಭಟನೆ ವಿಚಾರವಾಗಿ ಪೂರ್ವಭಾವಿ ಸಭೆ ನಡೆಸಿದರು.ವಿಪರೀತ ಬೆಲೆ ಏರಿಕೆ ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡಿದೆ.ದಿನೇ ದಿನೇ ಪೆಟ್ರೋಲ್,ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯಾಗುತ್ತಿದ್ದು ಇದನ್ನು ನಿಯಂತ್ರಣ ಮಾಡುವಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ವಿಫಲವಾಗಿದೆ.ದೇಶದ ಆರ್ಥಿಕ ಸ್ಥಿತಿ ದುಸ್ತರವಾಗಿದೆ.ಇದನ್ನು ನಿಯಂತ್ರಿಸುವಲ್ಲಿ ವಿ-ಲವಾದ ಸರಕಾರ ದೇಶದ ಜನರಲ್ಲಿ ಚಿನ್ನ ಖರೀದಿಸಬೇಡಿ, ರಸಗೊಬ್ಬರ ಖರೀದಿಸಬೇಡಿ, ಇಂಧನ ಬಳಸಬೇಡಿ ಎಂದು ಆದೇಶ ಮಾಡುತ್ತದೆ.ಸರಕಾರದ ವೈಫಲ್ಯವನ್ನು ಜನರ ತಲೆ ಮೇಲೆ ಹೊರಿಸುವುದು ಸರಿಯಲ್ಲ ಎಂದು ಹೇಳಿದ ಶಾಸಕರು,ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿದೆ.ಸತತವಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಲೇ ಇರುವುದು ಯುವ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಸರಕಾರದ ಚೆಲ್ಲಾಟವಾಗಿದೆ.ಇದೆಲ್ಲವನ್ನೂ ಖಂಡಿಸಿ ಮತ್ತು ಜನತೆಗೆ ಕೇಂದ್ರದ ವೈ-ಲ್ಯವನ್ನು ತಿಳಿಸುವ ಉದ್ದೇಶದಿಂದ ಈ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೃಷ್ಣಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ, ಯು.ಟಿ ತೌಸೀಫ್, ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರೈ ಮಠಂತಬೆಟ್ಟು, ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಪಕ್ಷದ ಪ್ರಮುಖರಾದ ಕುಂಬ್ರ ದುರ್ಗಾಪ್ರಸಾದ್ ರೈ, ಜೋಕಿಂ ಡಿ’ಸೋಜಾ, ರಮಾನಾಥ ವಿಟ್ಲ, ಯಾಕೂಬ್ ಮುಲಾರ್,ಅಸ್ಕರ್ ಅಲಿ ನೆಕ್ಕಿಲಾಡಿ, ಮಹಾಲಿಂಗ ನಾಯ್ಕ, ಜಯಪ್ರಕಾಶ್ ಬದಿನಾರ್, ಹೊನ್ನಪ್ಪ ಕೈಂದಾಡಿ, ಚಂದ್ರಪ್ರಭಾ ಗೌಡ, ಸನತ್ ಕುಮಾರ್ ರೈ, ಪೂರ್ಣೇಶ್ ಭಂಡಾರಿ, ವಿಕ್ರಂ ಶೆಟ್ಟಿ, ಸುಶಾಂತ್, ಸುಮಿತ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಬನ್ನೂರು ಮತ್ತಿತರರು ಉಪಸ್ಥಿತರಿದ್ದರು.










