






ನೆಲ್ಯಾಡಿ: ಜೆಸಿಐ ನೆಲ್ಯಾಡಿ ವತಿಯಿಂದ ಆಯೋಜಿಸಲಾದ 14 ದಿನಗಳ ಯೋಗ ಶಿಬಿರದ ಸಮಾರೋಪ ಸಮಾರಂಭ ಮೇ.17ರಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯಲ್ಲಿ ಜರುಗಿತು.


ಅಧ್ಯಕ್ಷತೆಯನ್ನು ಜೆಸಿಐ ನೆಲ್ಯಾಡಿ ಇದರ ಅಧ್ಯಕ್ಷೆ ಪ್ರವೀಣಿ ಸುಧಾಕರ್ ಶೆಟ್ಟಿ ವಹಿಸಿದ್ದರು. ಎರಡು ವಾರಗಳಿಂದ ಯೋಗ ತರಗತಿಗಳನ್ನು ನಡೆಸಿ ಕೊಟ್ಟ ಯೋಗ ಶಿಕ್ಷಕರಾದ ಡಾ.ಅನೀಶ್ ಕುಮಾರ್, ಪ್ರಥಮ್ ಕುಮಾರ್ ಹಾಗೂ ಮುರಳಿ ಮೋಹನ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಜೆಸಿಐ ನೆಲ್ಯಾಡಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಲೇಡಿಜೆಸಿ ನವ್ಯಪ್ರಸಾದ್, ಯೋಜನಾ ನಿರ್ದೇಶಕ ದೇವಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.



ಜಾಹ್ನವಿ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿದರು. ಲೀಲಾ ಮೋಹನ್ ಜೆಸಿ ವಾಣಿ ವಾಚಿಸಿದರು. ಜೊತೆ ಕಾರ್ಯದರ್ಶಿ ಸುಪ್ರಿತಾ ರವಿಚಂದ್ರ ವಂದಿಸಿದರು. ಪುರಂದರ ಗೌಡ ಹಾಗೂ ರತಿಲತ ಅವರು ಯೋಗ ಶಿಬಿರದಲ್ಲಿ ತಮಗಾದ ಅನುಭವಗಳನ್ನು ಹಂಚಿಕೊಂಡರು.










