






ಪುತ್ತೂರು: ಬದಿಯಡ್ಕದ ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಬಳಿ ಬ್ಯಾಂಕಿನ ಕಾವಲುಗಾರನನ್ನು ಕೊಲೆ ಮಾಡಿದ ಆರೋಪಿಗಳನ್ನು ಬದಿಯಡ್ಕದ ಪೊಲೀಸರು ಪುತ್ತೂರಿನಲ್ಲಿ ಬಂಧಿಸಿದ್ದಾರೆ.


ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ಬಳಿ ಬ್ಯಾಂಕಿನ ಕಾವಲುಗಾರ ಮಾರ್ಪನಡ್ಕ ಬೆದ್ರಂಕೂಡ್ಲು ನಿವಾಸಿ ಸುರೇಶ್ (42ವ.) ಅವರು ಮೇ.17ರಂದು ರಾತ್ರಿ ಕೊಲೆಗೀಡಾಗಿದ್ದರು. ಘಟನೆ ಕುರಿತು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಬದಿಯಡ್ಕ ಠಾಣೆಯ ಪೊಲೀಸರು ಆರೋಪಿಗಳಿಬ್ಬರನ್ನು ಪುತ್ತೂರಿನ ಪಾಣಾಜೆಗೆ ಗ್ರಾಮದ ಆರ್ಲಪದವಿನ ಬಳಿ ವಶಕ್ಕೆ ಪಡೆದು ಕೊಂಡಿದ್ದಾರೆ. ಕುಂಬ್ಡಾಜೆ ಮಾಪಿಳತೊಟ್ಟಿ ಬಾಲಕೃಷ್ಣ ಅವರ ಪುತ್ರ ಕಿರಣ್(30ವ) ಮತ್ತು ಕುಂಬ್ಡಾಜ್ ಕರುವತ್ತಡ್ಕ ಪಾಲೇಕಾರ್ ಹೌಸ್ ಸುಬ್ಬ ನಾಯ್ಕ್ ಅವರ ಪುತ್ರ ಅಖಿಲೇಶ್ (25ವ) ಅವರು ಬಂಧಿತ ಆರೋಪಿಗಳು.



ಏತಡ್ಕ ಮೂಲಕ ಪರಾರಿಯಾದ ಆರೋಪಿಗಳು
ಎರಡು ಬೈಕ್‌ಗಳಲ್ಲಿ ಆಗಮಿಸಿದ ಆರೋಪಿಗಳಿಬ್ಬರು ಕೊಲೆ ಕೃತ್ಯ ಎಸಗಿದ ಬಳಿಕ ಒಂದು ಬೈಕ್‌ನಲ್ಲಿ ಪರಾರಿಯಾಗಿದ್ದರು. ಅವರು ಏತಡ್ಕ ಮೂಲಕ ಪುತ್ತೂರಿಗೆ ತೆರಳಿದ್ದರು ಎಂದು ಹೇಳಲಾಗಿದ್ದು, ಆರೋಪಿಗಳನ್ನು ಆರ್ಲಪದವು ಬಳಿ ಬಂಧಿಸಲಾಗಿದೆ ಎಂದು ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.










