ನಾಳೆ (ಮೇ 22)ಶ್ರೀ ಕ್ಷೇತ್ರ ಶರವೂರಿನಲ್ಲಿ ದೃಢಕಲಶ ಮತ್ತು ಅಭಿನಂದನಾ ಸಭೆ

0

ಆಲಂಕಾರು: ಸೀಮಾ ದೇವಸ್ಥಾನ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾ.25 ರಿಂದ ಎ.2 ರ ತನಕ ಬ್ರಹ್ಮಕಲಶೋತ್ಸವ ನಂತರ ಜಾತ್ರೋತ್ಸವ ವಿಜೃಂಭಣೆಯಿಂದ ನಡೆದಿದ್ದು ಶ್ರೀ ಕ್ಷೇತ್ರ ಶರವೂರಿನಲ್ಲಿ ಕ್ಷೇತ್ರದ ತಂತ್ರಿಗಳಾದ ವೇ ಮೂ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಮೇ 22 ಶುಕ್ರವಾರದಂದು ಬೆಳಿಗ್ಗೆ 8:00 ರಿಂದ ಶ್ರೀ ದೇವಳದಲ್ಲಿ ದೃಢಕಲಶ ಹಾಗೂ ಬ್ರಹ್ಮಕಲಶೋತ್ಸವದ ಅಭಿನಂದನಾ ಸಭೆ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತಾಧಿಗಳು ಆಗಮಿಸುವಂತೆ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಸುಬ್ರಹ್ಮಣ್ಯ ರಾವ್ ನಗ್ರಿ ಮತ್ತು ಸದಸ್ಯರು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ ಮತ್ತು ಪದಾಧಿಕಾರಿಗಳು, ಸದಸ್ಯರು, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಡಾ.ಹೇಮಂತ್ ರೈ ಮನವಳಿಕೆಗುತ್ತು ಮತ್ತು ಸದಸ್ಯರು ಮತ್ತು ವಿವಿಧ ಸಮಿತಿಗಳ
ಅಧ್ಯಕ್ಷರು,ಪದಾಧಿಕಾರಿಗಳು ಸದಸ್ಯರು,ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here