






ಪುತ್ತೂರು: ಮಲಾಲ ಅಲ್ಲಾ.. ಪಂಡಿತ ಫಕೀರ ಒಂದು ಗಜಲ್. ನಾಟಕಗಳ ಮೂಲಕ ನಾಟಕಕಾರರೂ ಆಗಿರುವ ಬೊಳುವಾರು ಮಹಮದ್ ಕುಂಇಿ ಯವರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕಾದಂಬರಿ ಸ್ವಾತಂತ್ರ್ಯದ ಓಟ ಇದೀಗ ರಂಗ ಪ್ರಯೋಗವಾಗಿ ನಾಡಿನಾದ್ಯಂತ ರಂಗ ಸಂಚಾರ ಮಾಡುತ್ತಿದೆ. 2026ರ ಮೇ 25 ಸೋಮವಾರ ಸಂಜೆ 6-30 ರಿಂದ ಪುತ್ತೂರು ಜೈನ ಭವನ ರಂಗಮಂದಿರದಲ್ಲಿ ನಡೆಯಲಿದೆ.


ಕನ್ನಡ ರಂಗಭೂಮಿಯ ಪ್ರಮುಖ ರಂಗ ಪರಿಣತರಾಗಿರುವ ನಟರಾಜ ಹೊನ್ನವಳ್ಳಿ, ಸಲ್ಮಾ ದಂಡಿನ, ರಾಘವ ಕಮ್ಮಾರ, ಡಾ. ಸಹನಾ ಪಿಂಜಾರ್, ಪ್ರಸನ್ನ ಸಾಗರ್. ಮುಂತಾದವರು ಒಟ್ಟಾಗಿ ಶಿವಮೊಗ್ಗ ರಂಗಾಯಣ ನೇತೃತ್ವದಲ್ಲಿ ನಿರ್ಮಿಸಿರುವ ರಂಗ ಪ್ರಯೋಗವಿದು. ಈ ಮಹತ್ವದ ನಾಟಕ ಪ್ರಯೋಗ ನೋಡಲು ಬನ್ನಿ ನೀವೂ ಸಾಕ್ಷಿಗಳಾಗಿ, ಉಚಿತ ಪ್ರವೇಶವಿದ್ದು, ಸ್ವಾತಂತ್ರ್ಯ ದ ಓಟ ನಾಟಕ ನೋಡಿ ಎಂದು ಕಾರ್ಯಕ್ರಮದ ಆಯೋಜಕರಾದ ಕಾಡು ಬಳಗದ ರಾಘವೇಂದ್ರ ಎಚ್.ಎಂ.ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













