






ವಿಟ್ಲ ಪಟ್ಟಣಪಂಚಾಯತ್ ನಿವಾಸಿಗಳಿಗೆ ಬಿಜೆಪಿ ಅನ್ಯಾಯ ಮಾಡಿದೆ: ಶಾಸಕ ಅಶೋಕ್ ರೈ


ಪುತ್ತೂರು: ಶಾಸಕನಾಗುವ ಮೊದಲು ನಾನು ಬಿಜೆಪಿಯಲ್ಲಿದ್ದೆ, ಆಗ ವಿಟ್ಲ ಪಟ್ಟಣ ಪಂಚಾಯತ್ ನಿವಾಸಿಗಳು ಅವರು ಮನೆ ಕಟ್ಟಿದ ಅಡಿಸ್ಥಳದ ಹಕ್ಕುಪತ್ರಕ್ಕೆ ಮನವಿ ಮಾಡಿಕೊಂಡಿದ್ದರು. 1.38 ಸೆಂಟ್ಸ್ ಜಾಗದ ಹಕ್ಕು ಪತ್ರ ಕೊಟ್ರೆ ಅದರಿಂದ ಏನೂ ಮಾಡಲು ಸಾಧ್ಯವಿಲ್ಲ ಕನಿಷ್ಠ 2.75 ಸೆಂಟ್ಸ್ ಮಾಡಿಕೊಡಿ ಎಂದು ಮನವಿ ಮಾಡಿದ್ದರು. ಅಂದಿನ ಬಿಜೆಪಿ ಶಾಸಕರು ಅದನ್ನು ಮಾಡಿಕೊಟ್ಟಿದ್ದಾರ? ಅವರಿಂದ ಅದು ಸಾಧ್ಯವಾಗಿದೆಯಾ? ಚುನಾವಣೆ ಸಮಯದಲ್ಲಿ ಇದೇ ವಿಚಾರದಲ್ಲಿ ಭರವಸೆ ಕೊಟ್ಟು ಬಳಿಕ ಮಾಡಿದ್ದು ದೊಡ್ಡ ಮೋಸ ಇದನ್ನು ಜನ ಮರೆತಿಲ್ಲ ಎಂದ ಶಾಸಕರು ಇವರು ಅಧಿಕಾರದಲ್ಲಿದ್ದಾಗ ಯರಿಗಾದರೂ ಒಂದು ಸೆಂಟ್ಸ್ ಜಾಗ ಕೊಟ್ಟಿದ್ದಾರ ಎಂದು ಶಾಸಕ ಅಶೋಕ್ ರೈ ಪ್ರಶ್ನಿಸಿದರು. ಅವರು ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಣ್ಣಮೂಲೆ ಪ ಪಂಗಡ ಕಾಲನಿ ರಸ್ತೆಯ ಅಭಿವೃದ್ದಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.



ರಸ್ತೆಗೆ 6 ಲಕ್ಷ ಅನುದಾನ ಮಂಜೂರು ಮಾಡಿದ್ದು ಈ ಭಾಗದ ಜನತೆಯ ಬಹುಕಾಲದ ಬೇಡಿಕೆಯ ರಸ್ತೆ ಇದಾಗಿದೆ. ಕಾಂಗ್ರೆಸ್ ದಲಿತ ವಿರೋಧಿ ಎಂದು ಬಿಜೆಪಿಯವರು ಹೇಳುತ್ತಾರೆ. ಹಿಂದೆ ಬಿಜೆಪಿ ಸರಕಾರ ಇತ್ತು ಬಿಜೆಪಿ ಶಾಸಕರಿದ್ದರು ಎಷ್ಟು ದಲಿತರ ಅಭಿವೃದ್ದಿ ಮಾಡಿದ್ದಾರೆ? ಎಷ್ಟು ಕಡೆ ದಲಿತರ ಕಾಲನಿಯ ರಸ್ತೆಗೆ ಅನುದಾನ ನೀಡಿದ್ದಾರೆ? ಬಾಯಲ್ಲಿ ಬೊಗಳೆ ಬಿಡುವುದು ಬಿಜೆಪಿ ಕೆಲಸ ನಾವು ನುಡಿದಂತೆ ನಡೆದಿದ್ದೇವೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ದಲಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಕಾಲನಿ ಅಭಿವೃದ್ದಿಗೆ ಅನುದಾನ ನೀಡಿದ್ದೇನೆ. ರಾಜಕೀಯ ಮಾಡುವವರು ಸರಿಯಾಗಿ ತಿಳಿದು ರಾಜಕೀಯ ಮಾಡಬೇಕು , ಆರೋಪ ಮಾಡುವವರು ತಾನು ಹಿಂದೆ ಏನು ಮಾಡಿದ್ದೇನೆ ಎಂಬುದನ್ನು ತಿಳಿದುಕೊಂಡು ಮಾತನಾಡಬೇಕು. ವಿಟ್ಲ ಪಟ್ಟಣ ಪಂಚಾಯತ್‌ಗೆ ಸಾಕಷ್ಟು ಅನುದಾನವನ್ನು ನೀಡಿದ್ದೇನೆ ಮುಂದೆಯೂ ಅನುದಾನ ನೀಡುವುದಾಗಿ ಶಾಸಕರು ತಿಳಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಈ ವ್ಯಾಪ್ತಿಯಲ್ಲಿ ಪ್ರತೀಯೊಬ್ಬರಿಗೂ ಕುಡಿಯುವ ನೀರು ಪೂರೈಕೆಯಾಗುವಲ್ಲಿ ಪ್ರಥಮ ಆಧ್ಯತೆ ನೀಡುವುದು ನನ್ನ ಯೋಜನೆಯಲ್ಲಿ ಸೇರಿದೆ. ಜನತೆ ಅಭಿವೃದ್ದಿ ಪರ ಇರಬೇಕು ಆವಾಗ ಮಾತ್ರ ನಮ್ಮ ಪಟ್ಟಣ ಅಭಿವೃದ್ದಿಯಾಗಲು ಸಾಧ್ಯವಾಗುತ್ತದೆ ಎಂದು ಶಾಸಕರು ಹೇಳಿದರು.
ಕಾರ್ಯಕ್ರಮದಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಶೆಟ್ಟಿ, ರಮನಾಥ ವಿಟ್ಲ, ಮೂಸಾ ಒಕ್ಕೆತ್ತೂರು, ವಲಯ ಅಧ್ಯಕ್ಷಜಾನ್ ವಿಟ್ಲ, ಹಾರಿಸ್,ರಾಮಣ್ಣ ಪಿಲಿಂಜ, ನಿಶಾಂತ್ ಶೆಟ್ಟಿ, ಸುಮಿತ್ ಶೆಟ್ಟಿ ಕಂಬಳಬೆಟ್ಟು , ಯಶವಂತ , ರಶೀದ್ ಸಿ ಎಚ್, ಸಲೀಂ , ಬಾತಿಷಾ, ರಝಾಕ್, ಮೊದಲಾದವರು ಉಪಸ್ಥಿತರಿದ್ದರು.










