ಕುಡಿಯುವ ನೀರಿನ ತೊಂದರೆಗೆ ಶಾಸಕರಿಂದ ಸ್ಪಂದನೆ : 10 ಗ್ರಾಮಗಳಿಗೆ 16.66 ಲಕ್ಷ ರೂ. ಅನುದಾನ ಮಂಜೂರು

0

ಪುತ್ತೂರು: ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾದ ಪುತ್ತೂರು ವಿಧಾನಸಭಾ ಕ್ಷೇತ್ರದ ಹತ್ತು ವಿವಿಧ ಗ್ರಾಮಗಳಿಗೆ ಕೊಳವೆ ಬಾವಿ ನಿರ್ಮಾಣಕ್ಕೆ 16.66 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ಗ್ರಾಮಗಳ ವಿವಿಧ ಕಡೆಗಳಲ್ಲಿ ಇದ್ದ ಕೊಳವೆ ಬಾವಿ ಬತ್ತಿ ಹೋಗಿದ್ದ ಕಾರಣ ನೀರಿಗೆ ತತ್ವಾರ ಉಂಟಾಗಿತ್ತು. ಗ್ರಾಮಸ್ಥರು ಈ ಸಮಸ್ಯೆಯನ್ನು ಶಾಸಕರ ಬಳಿ ಹೇಳಿಕೊಂಡಿದ್ದು ಬೇಡಿಕೆಗೆ ಸ್ಪಂದಿಸಲಾಗಿದೆ.
ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ, ಬಜತ್ತೂರು ಗ್ರಾಮದ ಮೇಲೂರು, ಒಲಮೊಗ್ರು ಗ್ರಾಮದ ಇಡಿಂಜಿಲ,ಸರ್ವೆ ಗ್ರಾಮದ ಕಟ್ಟತ್ತಡ್ಕ, 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ,ಆರ್ಯಾಪು ಗ್ರಾಮದ ಕಲ್ಲರ್ಪೆ, ಹಿರೆಬಂಡಾಡಿ ಗ್ರಾಮದ ಪಾಲೆತ್ತಡಿ,ಕೆಯ್ಯೂರು ಗ್ರಾಮದ ಕಟ್ಟತ್ತಾರು,ಕೋಡಿಂಬಾಡಿ ಗ್ರಾಮದ ಕೊಡಿಮರ,ಉಪ್ಪಿನಂಗಡಿ ಗ್ರಾಮದ ನೂಜಿ ಎಂಬಲ್ಲಿಗೆ ಕೊಳವೆ ಬಾವಿ ಮಂಜೂರಾಗಿದೆ. ತುರ್ತಾಗಿ ಕೊಳವೆ ಬಾವಿಯನ್ನು ತೆಗೆದು ಆಯಾ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದಾರೆ.

ಮೇ ತಿಂಗಳಲ್ಲಿ ಕೆಲವು ಕಡೆ ಕುಡಿಯುವ ನೀರಿಗೆ ಸಂಕಷ್ಟ ಉಂಟಾಗಿದೆ. ಕ್ಷೇತ್ರದ ಎಲ್ಲೂ ನೀರಿಗೆ ಕಷ್ಟ ಉಂಟಾಗಬಾರದು ಎಂಬ ಉದ್ದೇಶದಿಂದ ಕೊಳವೆಬಾವಿ ಮಂಜೂರು ಮಾಡಲಾಗಿದೆ. ಕೊಳವೆ ಬಾವಿ ಕಾಮಗಾರಿ ಪೂರ್ಣವಾಗುವ ತನಕ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಗ್ರಾಪಂ ಗೆ ಸೂಚನೆಯನ್ನು ನೀಡಲಾಗಿದೆ. ಕೆಲವು ಕಡೆಗಳಲ್ಲಿ ನಮ್ಮ ಟ್ರಸ್ಟ್ ಮೂಲಕವೂ ನೀರು ಪೂರೈಕೆ ಮಾಡಲಾಗುತ್ತಿದೆ. ಮೂಲಭೂತ ಸೌಕರ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲಾಗುವುದು
ಅಶೋಕ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here