ವಸತಿರಹಿತ ಪ.ಜಾತಿ, ಪ.ಪಂಗಡದ ಅಲೆಮಾರಿ ಸಮುದಾಯದವರಿಗೆ ಮನೆ ನಿರ್ಮಾಣಕ್ಕೆ ಸಹಾಯಧನ: ಅರ್ಜಿ ಆಹ್ವಾನ, ಮೇ 30 ಕೊನೆ ದಿನ

0

ಪುತ್ತೂರು: ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ನಿವೇಶನವಿರುವ, ವಸತಿರಹಿತ ಪ.ಜಾತಿ(ಅಜಿಲ, ಬೈರ, ನಲಿಕೆ, ಪರವನ್, ಮಾಯಿಲ, ಚಕ್ಕಲಿಯನ್), ಪ.ಪಂಗಡಗಳ(ಕೊರಗ, ಮಲೆಕುಡಿಯ) ಅಲೆಮಾರಿ ಸಮುದಾಯದವರಿಗೆ ವಸತಿ ಸೌಕರ್ಯವನ್ನು ಕಲ್ಪಿಸಲು ಸಹಾಯಧನವಾಗಿ ಗ್ರಾಮೀಣ ಪ್ರದೇಶದವರಿಗೆ ರೂ.1.75 ಲಕ್ಷ ಹಾಗೂ ನಗರ ಪ್ರದೇಶದವರಿಗೆ ರೂ.2ಲಕ್ಷದ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ಅಲ್ಲಿಕೆಗೆ ಮೇ.30 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಪುತ್ತೂರು ಸಮಾಜ ಕಲ್ಯಾಣ ಇಲಾಖೆ ಕಛೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here