







ಆಲಂಕಾರು: ಶ್ರೀ ದುರ್ಗಾಂಬ ಕಲಾಸಂಗಮ ಶ್ರೀ ಕ್ಷೇತ್ರ ಶರವೂರು ಇದರ ವತಿಯಿಂದ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆಯುತ್ತಿರುವ ಯಕ್ಷಗಾನ ತಾಳಮದ್ದಳೆಯ 31ನೇ ಸೇವೆಯಾಗಿ ’ ಕೃಷ್ಣ ಸಂಧಾನ ’ಯಕ್ಷಗಾನ ತಾಳಮದ್ದಳೆ ಮೇ 23ರಂದು ನಡೆಯಿತು.


ಹಿಮ್ಮೇಳದಲ್ಲಿ ಡಿ.ಕೆ. ಆಚಾರ್ಯ ಹಳೆನೇರೆಂಕಿ, ಶಿವರಂಜನ್ ಕಡಬ, ಚಂದ್ರ ದೇವಾಡಿಗ ನಗ್ರಿ, ಶ್ರೀಪತಿ ಭಟ್ ಉಪ್ಪಿನಂಗಡಿ, ಮುಮ್ಮೇಳದಲ್ಲಿ ಜಯರಾಮ್ ಗೌಡ ಬಲ್ಯ (ಕೃಷ್ಣ1), ರಾಘವೇಂದ್ರ ಭಟ್ ತೋಟಂತಿಲ (ವಿದುರ 1), ಗುರುಪ್ರಸಾದ್ ಆಲಂಕಾರು (ಕೌರವ), ರಾಮ್‌ಪ್ರಕಾಶ್ ಕೊಡಂಗೆ (ವಿದುರ ೨), ದಿವಾಕರ ಆಚಾರ್ಯ ಹಳೆನೇರೆಂಕಿ (ಕೃಷ್ಣ2), ನಾರಾಯಣ ಭಟ್ ಆಲಂಕಾರು (ಭಾನುಮತಿ) ಸಹಕರಿಸಿದರು. ಶ್ರೀನಿವಾಸ್ ರಾವ್ ಶರವೂರು ಬೆಂಗಳೂರು ಮತ್ತು ಮನೆಯವರು ಸೇವಾರ್ಥಿಗಳಾಗಿದ್ದರು. ಭಾಗವತರಾದ ಡಿ. ಕೆ. ಆಚಾರ್ಯ ಸ್ವಾಗತಿಸಿ, ಕಾರ್ಯದರ್ಶಿ ದಿವಾಕರ ಆಚಾರ್ಯ ವಂದಿಸಿದರು. ಕಲಾಭಿಮಾನಿಗಳು, ಭಕ್ತಾದಿಗಳು ಹಾಗೂ ದೇವಸ್ಥಾನದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.













