






ಪುತ್ತೂರು: ಚೆಸ್ ನಲ್ಲಿ ತಲೆ ಖರ್ಚು ಜಾಸ್ತಿ, ಹಾಗಾಗಿ ಆರಾಮವಾಗಿ ಆಡಿ, ಗೆಲ್ಲುವುದು ಮುಖ್ಯಗುರಿಯಲ್ಲ. ಒಳ್ಳೆಯ ಸ್ಪರ್ಧಾಳುಗಳಾಗಿ ಮೂಡಿ ಬನ್ನಿ ಎಂದು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಅವರು ಹೇಳಿದರು.



ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ ವತಿಯಿಂದ ಮೇ.31ರಂದು ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ ನಡೆದ ಪುತ್ತೂರು ಚೆಸ್ ಕಪ್ ಅನ್ನು ಉದ್ಘಾಟಿಸಿ ಮಾತನಾಡಿದರು. ದೇವಳದ ಸಾನಿಧ್ಯದಲ್ಲಿ 2ನೇ ಬಾರಿ ಚೆಸ್ ಸ್ಪರ್ಧೆ ನಡೆಯುತ್ತಿದೆ. ಕಳೆದ ಭಾರಿಗಿಂತ ಈ ಭಾರಿ ಹೆಚ್ಚು ಸ್ಪರ್ದಾಲುಗಳು ಭಾಗವಹಿಸಿರುವುದು ಸಂತೋಷ. ನಮಗೆ ಚೆಸ್ ಹೇಳಿ ಕೊಡುವವರೂ ಇರಲಿಲ್ಲ ಮತ್ತು ಆಸಕ್ತಿಯೂ ಇರಲಿಲ್ಲ. ಇವತ್ತು ಚೆಸ್ ತರಬೇತಿಗೆ ಅವಕಾಶ ಎಲ್ಲಾ ಕಡೆ ಇದೆ. ಮಕ್ಕಳು ಇದರ ಸದುಪಯೋಗ ಪಡೆಯಬೇಕು. ಸ್ಪರ್ಧೆಯಲ್ಲಿ ಗೆಲ್ಲುವುದು ಮುಖ್ಯಗುರಿಯಲ್ಲ. ಒಳ್ಳೆಯ ಸ್ಪಾರ್ಧಾಳುಗಳಾಗಬೇಕು. ದೇಶಕ್ಕೆ ಕೀರ್ತಿ ತರುವ ಕೆಲಸ ಮಾಡಿ ಎಂದ ಅವರು ಚೆಸ್ ಗಾಗಿ ಈ ಸಭಾಂಗಣವನ್ನು ಉಚಿತವಾಗಿ ನೀಡುತ್ತೇನೆ. ಮುಂದಿನ ದಿನ ದೇವಳದ ಜೀರ್ಣೋದ್ದಾರ ಸಹಿತ ನೂತನ ಸಭಾವನ ನಿರ್ಮಾಣ ಆಗಲಿದೆ ಎಂದರು. ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ ಅಧ್ಯಕ್ಷೆ ಸತ್ಯಲತಾ ಅಧ್ಯಕ್ಷತೆ ವಹಿಸಿದರು.



ಪುತ್ತೂರಿನ ನೂತನ ಆರ್ಬಿಟರ್ ಗೆ ಗೌರವ:
ಪುತ್ತೂರಿನಿಂದ ನೂತನ ಆರ್ಬಿಟರ್ ಆಗಿ ತೇರ್ಗಡೆಯಾದ ದಿನೇಶ್ ಪ್ರಸನ್ನ ಮತ್ತು ಉಮಾ ಡಿ ಪ್ರಸನ್ನ ಅವರ ಪುತ್ರಿ ದೀಕ್ಷಾ ಪಾರ್ವತಿ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು.
ಪುತ್ತೂರು ತಾಲೂಕು ಚೆಸ್ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷೆ ಉಮಾ ಡಿ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ.ಈಶಪಾರ್ವತಿ ಪ್ರಾರ್ಥಿಸಿದರು. ಡಾ.ಎಸ್ ಎಮ್ ಪ್ರಸಾದ್ ಸ್ವಾಗತಿಸಿದರು. ಕಾರ್ಯದರ್ಶಿ ದಾಮೋದರ್ ಕಣಜಾಲು ವಂದಿಸಿದರು. ಪ್ರಕಾಶ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಆರ್ ಬಿಟರ್ ಆಗಿ ಸಾಕ್ಷತ್ ಯು ಕೆ, ಸೌಂದರ್ಯ, ರಾಹುಲ್, ದೀಕ್ಷಾ ಪಾರ್ವತಿ ಸಹಕರಿಸಿದರು.









