ಬೆಳ್ಳಿ ಹಬ್ಬ ಆಚರಿಸಿದ ಈಶ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಗೆ DMEd ಶಿಕ್ಷಕಿ ತರಬೇತಿ ಪರೀಕ್ಷೆಯಲ್ಲಿ ಸತತ 26ನೇ ಬಾರಿಗೆ 100% ಫಲಿತಾಂಶ

0

ಪುತ್ತೂರು : ಭಾರತ ಸರಕಾರದ ಮಾನವ ಸಂಪನ್ಮೂಲ ಇಲಾಖೆಯ ಅಧೀನದಲ್ಲಿರುವ ಭಾರತ್ ಸೇವಕ್ ಸಮಾಜ್ ನ ಆಶ್ರಯದಲ್ಲಿ ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈಶ ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಯಲ್ಲಿ DMEd ಶಿಕ್ಷಕಿ ತರಬೇತಿ ಪರೀಕ್ಷೆಗೆ ಹಾಜರಾದ 39 ವಿದ್ಯಾರ್ಥಿನಿಯರಲ್ಲಿ 34 ವಿದ್ಯಾರ್ಥಿನಿಯರು ವಿಶಿಷ್ಟ ಶ್ರೇಣಿ ಮತ್ತು 5 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುವುದರೊಂದಿಗೆ ಸಂಸ್ಥೆಗೆ 26ನೇ ಬಾರಿಗೆ ಸತತ 100% ಫಲಿತಾಂಶ ಲಭಿಸಿದೆ.


ತೇಜಶ್ರೀ.ಎಸ್.ಎ (1147), ಕವಿತಾ (1147), ಚೈತ್ರ ಬಿ (1144), ಕುಮಾರಿ ಆರ್ (1142), ರಕ್ಷಿತಾ ಹೆಚ್(1120), ಅಮೃತಾ ಎ.ಆರ್(1114), ಯಶೋದಾ ಬಿ (1111), ಶೋಭಾ ಬಿ(1104), ಸಾರಿಕಾ.ಜಿ (1101), ಚೈತ್ರ (1090), ದಿವಿತಾ ಕೆ (1065), ರೂಪಿತಾ (1065), ಪೂಜಿತಾ ಕೆ (1059), ಆಯಿಷತ್ ಸ್ವಾಲಿಯಾ (1058), ವಿದ್ಯಾ (1046), ಸ್ಟೆಫೀ ಡಿಸೋಜ (1046), ಖದೀಜತ್ ಸೆಮೀಮ (1044), ಚೈತ್ರಶ್ರೀ (1041), ಮುಬಿನಾ (1039), ವಿದ್ಯಾಶ್ರೀ ಕೆ (1030), ಶಶಿಕಲಾ(1030), ಸುನೀತಾ ಎಮ್ (1020), ಮುಬಿನ್ ತಾಜ್ ಖಾಜಿ(1017), ಸೌಮ್ಯ ಬಿ (1012), ವಿದ್ಯಾಶ್ರೀ ಕೆ ಎಸ್ (1010), ಜರ್ಶಿನಿ ಎಸ್ (1007), ನಸೀಮ (983), ಪ್ರಭಾ ಡಿ (973), ಸುಲೋಚನಿ(962),ಸಂಧ್ಯಾ (932), ಫಾತಿಮತ್ ನಿಶಾ( 898), ರಮ್ಯ (876),ಉಷಾಲಕ್ಷ್ಮೀ ಆರ್ (858), ಲತಾ (843), ವಿಶಿಷ್ಟ ಶ್ರೇಣಿಯೊಂದಿಗೆ ಮತ್ತು ಆಯಿಷತ್ ಮುಬಾಶಿರ (832), ತೇಜಸ್ವಿನಿ (816), ವನಿತಾ ಕೆ(800), ಮಮತಾ ಎನ್ (793), ಪದ್ಮಶ್ರೀ (755) ಪ್ರಥಮ ದರ್ಜೆಯೊಂದಿಗೆ ಪಾಸಾಗಿ ಸಂಸ್ಥೆಗೆ 26ನೇ ಬಾರಿಗೆ 100% ಫಲಿತಾಂಶ ಲಭಿಸಿರುತ್ತದೆ.


ಸಂಭ್ರಮದ ಬೆಳ್ಳಿ ಹಬ್ಬ ಆಚರಿಸಿದ ಈಶ ಮೊಂಟೆಸರಿ ಶಿಕ್ಷಣ ಸಂಸ್ಥೆಗೆ ವಿಶ್ವ ಕೌಶಲ್ಯ ಕೌನ್ಸಿಲ್‌ನಿಂದ ಮಾನ್ಯತೆ ದೊರಕಿದ್ದು,ಇಲ್ಲಿ ಮೊಂಟೆಸರಿ ಶಿಕ್ಷಣ ಪಡೆದ ವಿದ್ಯಾರ್ಥಿನಿಯರಿಗೆ ಅಂಕಪಟ್ಟಿಯೊಂದಿಗೆ ವಿಶ್ವ ಕೌಶಲ್ಯ ಕೌನ್ಸಿಲ್‌ನಿಂದ ವಿವಿಧ ತರಬೇತಿಯೊಂದಿಗೆ ಸರ್ಟಿಫಿಕೇಟ್ ದೊರಕಲ್ಲಿದ್ದು ದೇಶ ವಿದೇಶಾದಾದ್ಯಂತ 100% ಉದ್ಯೋಗಾವಾಕಾಶವಿರುವುದು.
2026-27ನೇ ಸಾಲಿನ ತರಗತಿಗೆ ದಾಖಲಾತಿ ಆರಂಭಗೊಂಡಿದ್ದು ಉಚಿತ ಕಂಪ್ಯೂಟರ್, ಉಚಿತ ಸ್ಪೋಕನ್ ಇಂಗ್ಲೀಷ್, ಸಹವಾಸ ವಿಶೇಷ ಶಿಬಿರ, ಈಶ ಪ್ರತಿಭಾ ದಿನಾಚರಣೆ, ವಾರ್ಷಿಕ ಕ್ರೀಡಾಕೂಟ, ವಿಶೇಷ ಅಧ್ಯಯನ ಪ್ರವಾಸ ಇತ್ಯಾದಿ ಅವಕಾಶವಿದ್ದು ಆಸಕ್ತರಿಗೆ ಶನಿವಾರ, ಆದಿತ್ಯವಾರ ಹಾಗೂ ಸರ್ಕಾರಿ ರಜಾದಿನಗಳಂದು ವಿಶೇಷ ಆನ್‌ಲೈನ್, ಆಫ್‌ಲೈನ್ ತರಗತಿಗಳು ಲಭ್ಯವಿರುವುದು. ಆಸಕ್ತರು ಸಂಸ್ಥೆಯ 8722293944 , 9448153379 ನಂಬರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡು ಸಂಸ್ಥೆಗೆ ಆಗಮಿಸಿ ದಾಖಲಾತಿ ಮಾಡಿಕೊಳ್ಳುವಂತೆ ಈಶ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಗೋಪಾಲಕೃಷ್ಣರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here