ಬಲ್ನಾಡು ಉಜ್ರುಪಾದೆಯಲ್ಲಿ ಬಾವಿಗೆ ಬಿದ್ದ ಎರಡು ಬೆಕ್ಕುಗಳ ರಕ್ಷಣೆ

0

ಪುತ್ತೂರು: ಬಲ್ನಾಡು ಗ್ರಾಮದ ಉಜ್ರುಪಾದೆಯಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ಎರಡು ಬೆಕ್ಕುಗಳನ್ನು ಪುತ್ತೂರು ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.

ಉಜ್ರುಪಾದೆಯ ಮನೆಯೊಂದರ ಬಾವಿಗೆ ಎರಡು ಬೆಕ್ಕುಗಳು ಆಕಸ್ಮಿಕವಾಗಿ ಬಿದ್ದಿದ್ದವು. ಬಾವಿಯಿಂದ ಮೇಲೆ ಬರಲು ಸಾಧ್ಯವಾಗದೆ ಬೆಕ್ಕುಗಳು ಒದ್ದಾಡುತ್ತಿರುವುದನ್ನು ಗಮನಿಸಿ ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಪುತ್ತೂರು ಅಗ್ನಿಶಾಮಕದಳ ಕಾರ್ಯಾಚರಣೆ ನಡೆಸಿ ಎರಡೂ ಬೆಕ್ಕುಗಳನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ರಕ್ಷಿಸಿದರು.ರಕ್ಷಿಸಲಾದ ಬೆಕ್ಕುಗಳನ್ನು ಬಳಿಕ ಸುರಕ್ಷಿತವಾಗಿ ಬಿಡಲಾಗಿದೆ.

LEAVE A REPLY

Please enter your comment!
Please enter your name here