







ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಾಲ್ಕು ಮಸೀದಿ ಮತ್ತು ಮದ್ರಸ ನವೀಕರಣ ಹಾಗೂ ದುರಸ್ಥಿಗೆ ವಕ್ಫ್ ಇಲಾಖೆಯ ಮೂಲಕ 75 ಲಕ್ಷ ರೂ ಅನುದಾನ ಮಂಜೂರಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.


ನಾಲ್ಕು ಮಸೀದಿಗಳ ಪ್ರಮುಖರು ಅನುದಾನ ಕೋರಿ ಅರ್ಜಿ ಸಲ್ಲಿಸಿದ್ದರು. ಬೆಟ್ಟಂಪಾಡಿ ಗ್ರಾಮದ ರೆಂಜ ಫಾರೂಕ್ ಜುಮಾ ಮಸ್ಜಿದ್ ಹಾಗೂ ಖುವ್ವತ್ತುಲ್ ಇಸ್ಲಾಂ ಮದ್ರಸ ಇದರ ಅಭಿವೃದ್ದಿ ಕಾಮಗಾರಿಗೆ 20 ಲಕ್ಷ, ಬಜತ್ತೂರು ಗ್ರಾಮದ ಹಳೆನೇರಂಕಿ ಮುಹಿಯುದ್ದೀನ್ ಜುಮ ಮಸ್ಜಿದ್ ಇದರ ದುರಸ್ಥಿ ಮತ್ತು ನವೀಕರಣಕ್ಕೆ 15 ಲಕ್ಷ, ಶಾಂತಿಗೋಡು ಗ್ರಾಮದ ವೀರಮಂಗಲ ಬದ್ರಿಯಾ ಜುಮಾ ಮಸೀದಿ ಇದರ ದುರಸ್ಥಿ ಮತ್ತು ನವೀಕರಣಕ್ಕೆ 15 ಲಕ್ಷ ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಇದರ ಅಧೀನದಲ್ಲಿರುವ ಸಾಲ್ಮರ ಸಯ್ಯದ್ ಮಲೆ ಜುಮಾ ಮಸೀದಿ ಮತ್ತು ಮಿಸ್ಬಾಹುಲ್ ಹುದಾ ಮದ್ರಸ ಕಟ್ಟಡ ದುರಸ್ಥಿಗೆ 25 ಲಕ್ಷ ರೂ ಅನುದಾನ ಬಿಡುಗಡೆಯಾಗಿದೆ.













