ಎಸ್‌ಎಸ್‌ಎಲ್‌ಸಿ ರಾಜ್ಯ ಟಾಪರ್ ಅನನ್ಯಾಗೆ ಬಿಜೆಪಿ ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರದಿಂದ ಅಭಿನಂದನೆ

0

ಪುತ್ತೂರು: 2025-26ನೇ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಊರಿಗೆ ಕೀರ್ತಿ ತಂದ ಅನನ್ಯಾ ಎ. ಅವರಿಗೆ ಬಿಜೆಪಿ ನೆಟ್ಟಣಿಗೆ ಮೂಡ್ನೂರು ಮಹಾಶಕ್ತಿ ಕೇಂದ್ರದ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.

ಅನನ್ಯಾ ಅವರ ಸ್ವಗೃಹದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಗ್ರಾಮಾಂತರ ಮಂಡಲ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಗಜಾನನ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಶಿವರಾಮ್ ಪಿ., ಮಹಾಶಕ್ತಿ ಕೇಂದ್ರ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ್ ಮುಂಡ್ಯ, ಕಾವು ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ನಹುಷ ಭಟ್, ಶಕ್ತಿ ಕೇಂದ್ರ ಸಂಚಾಲಕ ಪೂರ್ಣಚಂದ್ರ ನೆಲ್ಲಿತಡ್ಕ ಉಪಸ್ಥಿತರಿದ್ದರು.

ಬೂತ್ ಅಧ್ಯಕ್ಷರಾದ ಪ್ರವೀಣ ನೀರಳಿಕೆ, ಪ್ರತಿನ್ ತಳೆಬೈಲು, ಮಾಜಿ ಸೈನಿಕರಾದ ನಾರಾಯಣ ರೈ ಬೆಡಿಗದ್ದೆ, ಮಹಾಲಿಂಗ ಪಟಾಳಿ ಪಂಚೋಡಿ, ನಿವೃತ್ತ ಅಧ್ಯಾಪಕರಾದ ಆನಂದ ರೈ ಸಾಂತ್ಯ, ಅಚ್ಚುತ್ತ ಮಣಿಯಾಣಿ ಸಾಂತ್ಯ, ಶ್ರೀನಿವಾಸ ಬಸಿರಡ್ಕ ಮೊದಲಾದವರು ಭಾಗವಹಿಸಿ ವಿದ್ಯಾರ್ಥಿನಿಯನ್ನು ಅಭಿನಂದಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here