






ಕುರಿಯ: ಜೂನ್ 1ರ ಶಾಲಾ ಪ್ರಾರಂಭೋತ್ಸವ ದಿನದಂದು ಕುರಿಯ ಶಾಲೆಯ ಮಕ್ಕಳನ್ನು ಕುರಿಯ ಆಟೋ ಚಾಲಕ ಸಂಘದ ವತಿಯಿಂದ ಆಟೋ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು.


ಹೊಸದಾಗಿ ಶಾಲೆಗೆ ದಾಖಲಾದ ಮಕ್ಕಳನ್ನು ಬ್ಯಾಂಡ್ ಸೆಟ್‌ನೊಂದಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭ ಆಟೋ ಚಾಲಕರ ವತಿಯಿಂದ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.




ಕಾರ್ಯಕ್ರಮದಲ್ಲಿ ಮುಖ್ಯ ಗುರು ಫೆಲಿಸಿಟಾ ಡಿ ಕುನ್ಹಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೂಡಿಯಾರ್ ಪುರುಷೋತ್ತಮ ರೈ, ರಮೇಶ್ ರೈ ಡಿಂಬ್ರಿ, ಸನತ್ ರೈ ಕುರಿಯ, ಯಾಕೂಬ್ ಕುರಿಯ, ಆಟೋ ಸಂಘದ ಅಧ್ಯಕ್ಷ ರಮೇಶ್ ಅಂಚನ್ ಉಪಸ್ಥಿತರಿದ್ದರು.ನಿಝಾರ್ ಅಜ್ಜಿ ಕಟ್ಟೆ ಸ್ವಾಗತಿಸಿ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಕುರಿಯ ಧನ್ಯವಾದ ಸಲ್ಲಿಸಿದರು. ಶಾಲಾ ಅಧ್ಯಾಪಕ ವೃಂದ ಸಹಕರಿಸಿತು.










