ಪೆರ್ನೆಯ ಯತೀಶ್ ಗೌಡರ ಮೃತದೇಹ ಗುರುವಾಯನಕೆರೆಯಲ್ಲಿ ಪತ್ತೆ : ಕೊಲೆ ಶಂಕೆ ; ಪೊಲೀಸ್ ತನಿಖೆ ಚುರುಕು

0

ಪುತ್ತೂರು: ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ‌ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ ಸಮೀಪ ಜೂ.1ರಂದು ಬೆಳಿಗ್ಗೆ ಪತ್ತೆಯಾದ ಅಪರಿಚಿತ ಮೃತದೇಹದ ಗುರುತು ಪತ್ತೆಯಾಗಿದೆ.

ಮೃತ ಯುವಕ ಪೆರ್ನೆಯ ದಿ. ಕೂಸಪ್ಪ ಗೌಡ ಹಾಗೂ ಪದ್ಮಾವತಿ ದಂಪತಿಯ ದ್ವಿತೀಯ ಪುತ್ರ ಯತೀಶ್ ಗೌಡ (32) ಎಂದು ಗುರುತಿಸಲಾಗಿದೆ.

ಈತನನ್ನು ಕೊಲೆ ಮಾಡಲಾಗಿದೆ ಎಂದು ಸಂಶಯ ವ್ಯಕ್ತವಾಗಿದ್ದು ಪೊಲೀಸ್ ತನಿಖೆ ಚುರುಕುಗೊಂಡಿದೆ. ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಯತೀಶ್ ಆಗಾಗ ಮನೆ ಬಿಟ್ಟು ತೆರಳುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಅವರ ಸುಳಿವು ಮನೆಯವರಿಗೆ ಇರಲಿಲ್ಲ. ಇದೀಗ ಅವರ ಮೃತದೇಹ ಗುರುವಾಯನಕೆರೆಯ ಸಮೀಪದ ಶ್ರೀದೇವಿ ಹಾರ್ಡ್‌ವೇರ್ ಬಳಿ ಪತ್ತೆಯಾಗಿದೆ.


ಮೃತದೇಹ ಪತ್ತೆಯಾದ ಬಳಿಕ ಸ್ಥಳಕ್ಕೆ ಆಗಮಿಸಿದ ಮನೆಯವರು ಆತನ‌ ಗುರುತು ಪತ್ತೆ ಹಚ್ಚಿದ್ದಾರೆ. ಯತೀಶ್ ಮೇಲೆ ಕೆಲವರು ಹಲ್ಲೆ ನಡೆಸಿರುವ ಬಗ್ಗೆ ಮನೆಯವರಿಗೆ ಸಂಶಯವಿದೆ. ಅನುಮಾನಾಸ್ಪದ ಸಾವು ಎಂದು ಬೆಳ್ತಂಗಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಯತೀಶ್ ಗೌಡ ಅವರಿಗೆ ಥಳಿಸಿ ಕೊಲೆ ಮಾಡಲಾಗಿದೆ ಎಂದು ಸಂಶಯ ವ್ಯಕ್ತವಾಗಿದ್ದು, ಪೊಲೀಸರು ಮೂವರನ್ನು ವಶಕ್ಕೆ‌ ಪಡೆದಿದ್ದಾರೆ ಎಂದು‌ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here