ದೀಪ ಸಂಭ್ರಮದೊಂದಿಗೆ ಸಂಜಯನಗರ ಶಾಲಾ ಆರಂಭೋತ್ಸವ-ಸರಕಾರಿ ಸೌಲಭ್ಯಗಳ ಸರಿಯಾದ ಬಳಕೆಯೇ ನಾವು ನೀಡುವ ಸಹಕಾರ- ಶೇಸಪ್ಪ ನಾಯ್ಕ್

0

ಪುತ್ತೂರು: ಸರಕಾರಿ ಸೌಲಭ್ಯಗಳ ಸರಿಯಾದ ಬಳಕೆಯೇ ಸರಕಾರಕ್ಕೆ ನಾವು ಕೊಡುವ ದೊಡ್ಡ ಸಹಕಾರ ಎಂದು ದರ್ಬೆ ಲ್ಯಾಂಪ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ನಾಯ್ಕ್‌ರವರು ಹೇಳಿದರು. ಶಾಲಾ ಶಿಕ್ಷಣ ಇಲಾಖೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಜಯನಗರ ಇದರ 2026-27ನೇ ಸಾಲಿನ ಆರಂಭೋತ್ಸವದ ನೋಡಲ್ ಅಧಿಕಾರಿಯಾಗಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಕ್ಕಳಿಗೆ ದೀಪ ನೀಡಿ, ಆರತಿ ಮಾಡುವುದರೊಂದಿಗೆ ಮಕ್ಕಳನ್ನು ಸ್ವಾಗತಿಸಿ ಮಾತನಾಡಿ ಸರಕಾರವು ಶಿಕ್ಷಣಕ್ಕಾಗಿ ತುಂಬಾ ಯೋಜನೆಗಳನ್ನು ಮಾಡುತ್ತಿದೆ. ಈ ಯೋಜನೆಗಳನ್ನು ನಾವು ಸರಿಯಾಗಿ ಬಳಸಿಕೊಂಡಾಗ ಮಾತ್ರ ನಮ್ಮ ನಾಡು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ರಾಜೇಶ್ ಆಚಾರ್ಯ ಬೀರಮಲೆ ಮಾತನಾಡಿ ಶಿಕ್ಷಣ ನಮ್ಮೆಲ್ಲರ ಮೂಲಭೂತ ಅಗತ್ಯ ಮತ್ತು ಅವಶ್ಯಕತೆಯಾಗಿದೆ. ಸರಕಾರದ ಶಿಕ್ಷಣದ ಯೋಜನೆಗಳನ್ನು ಅರ್ಥವಿಸಿಕೊಂಡು ಅದಕ್ಕೆ ಪೋಷಕರು ಸ್ಪಂದಿಸಿದಾಗ ಮಾತ್ರ ಯೋಜನೆಗಳಿಂದ ಪ್ರತಿಫಲ ಪಡೆಯಲು ಸಾಧ್ಯ. ನಾವೆಲ್ಲರೂ ನಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕು ಎಂದು ಹೇಳಿದರು.
ಶಾಲಾ ಮುಖ್ಯಗುರು ರಮೇಶ್ ಉಳಯರವರು ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರದಿಂದ ಈ ವರ್ಷ ಹೊಸದಾಗಿ ಆರಂಭಗೊಂಡ ವಿಭಾಸ ಮಾಧ್ಯಮದ ಶಿಕ್ಷಣದ ಬಗ್ಗೆ ಪೋಷಕರಿಗೆ ತಿಳಿಸಿದರು.

ಮಕ್ಕಳ ಶಿಕ್ಷಣಕ್ಕಾಗಿ ಸರಕಾರವು ನೀಡುವ ಉಚಿತ ಪಠ್ಯಪುಸ್ತಕ, ಉಚಿತ ಸಮವಸ್ತ್ರ, ಕ್ಷೀರ ಭಾಗ್ಯ ಮಧ್ಯಾಹ್ನದ ಬಿಸಿಊಟ, ಮೊಟ್ಟೆ, ಬಾಳೆಹಣ್ಣು, ವಿಟಮಿನ್ ಮಾತ್ರೆಗಳು ಹಾಗೂ ವಿವಿಧ ಕಲಿಕಾ ಯೋಜನೆಗಳು ಮತ್ತು ವಿವಿಧ ಕಲಿಕಾ ಸೌಲಭ್ಯಗಳ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿದರು.ಮಕ್ಕಳಿಗೆ ಮೊದಲ ಹಂತದ ಸಮವಸ್ತ್ರ ಉಚಿತ ಪಠ್ಯಪುಸ್ತಕ ಹಾಗೂ ಉಚಿತ ಅಭ್ಯಾಸ ಪುಸ್ತಕಗಳನ್ನು ವಿತರಿಸಲಾಯಿತು.

ಶಾಲಾ ಹಿರಿಯ ಶಿಕ್ಷಕಿ ಸ್ಮಿತಾಶ್ರೀ ಕೊಕ್ಕಡ ವಿವಿಧ ಕಾರ್ಯಕ್ರಮಗಳ ನೆರವೇರಿಸಿದರು. ಸೌಮ್ಯ ಬಾಲಕೃಷ್ಣ ಸಹಕರಿಸಿದರು. ಎಸ್‌ಡಿಎಂಸಿ ಉಪಾಧ್ಯಕ್ಷೆ ಪುಷ್ಪಲತಾ ಉಮೇಶ್ ಸಂಜಯನಗರ, ಹಾಗೂ ಪೋಷಕರಾದ ಸಾವಿತ್ರಿ ವಿನೋಜ್ ಕುಮಾರ್ ಮರಿಲ್, ವಸಂತಿ ರಮೇಶ್ ಪೂಜಾರಿ ಮರಿಲ್, ರೆಹಮದತ್ ಕಮರುದ್ದೀನ್ ಸಂಜಯನಗರ, ಗೀತಾ ದಾಮೋದರ್ ಪಳಿಕೆ, ನಾಗೇಶ್ ಪಳಿಕೆ, ದಿವ್ಯ ರಘುರಾಮ ಬಲ್ನಾಡು, ಜ್ಯೋತಿ ರಾಜೇಶ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು. ಮಧ್ಯಾಹ್ನ ಮಕ್ಕಳಿಗೆ ಹಾಗೂ ಪೋಷಕರಿಗೆ ಸಿಹಿಊಟ ವಿತರಿಸಲಾಯಿತು.

LEAVE A REPLY

Please enter your comment!
Please enter your name here