ದೇಶಸೇವೆಯ ಕನಸು ನನಸು: ಉಪ್ಪಿನಂಗಡಿಯ ಪ್ರದೀಪ್ ಅಗ್ನಿವೀರ್‌ಗೆ ಆಯ್ಕೆ

0

ಉಪ್ಪಿನಂಗಡಿ: ಉಪ್ಪಿನಂಗಡಿಯ ಪ್ರತಿಭಾವಂತ ಯುವಕ ಪ್ರದೀಪ್ ಎ.ಕೆ. (21) ಅವರು ಭಾರತೀಯ ಸಶಸ್ತ್ರ ಪಡೆಗಳ ಅಗ್ನಿಪಥ್ ಯೋಜನೆಯಡಿ ‘ಅಗ್ನಿವೀರ್’ ಆಗಿ ಆಯ್ಕೆಯಾಗಿದ್ದಾರೆ.

ದಿವಂಗತ ಆನಂದ ಪೂಜಾರಿ ಮತ್ತು ವಿನೋದಾ ದಂಪತಿಯ ಪುತ್ರನಾದ ಪ್ರದೀಪ್, ಕಠಿಣ ಪರಿಶ್ರಮ, ಶಿಸ್ತು ಹಾಗೂ ದೇಶಸೇವೆಯ ಛಲದಿಂದ ಈ ಸಾಧನೆ ಮಾಡಿದ್ದಾರೆ. ಬಾಲ್ಯದಿಂದಲೇ ಸೇನೆಯಲ್ಲಿ ಸೇವೆ ಸಲ್ಲಿಸುವ ಕನಸು ಕಂಡಿದ್ದ ಅವರು, ಇದೀಗ ಆ ಕನಸನ್ನು ನನಸು ಮಾಡಿಕೊಂಡಿದ್ದಾರೆ.

ಅಗ್ನಿವೀರ್ ಆಗಿ ಆಯ್ಕೆಯಾಗಿರುವ ಪ್ರದೀಪ್ ಅವರು ಕೆಲವೇ ದಿನಗಳಲ್ಲಿ ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡು ತರಬೇತಿಯನ್ನು ಆರಂಭಿಸಲಿದ್ದಾರೆ. ಅವರ ಈ ಸಾಧನೆಗೆ ಊರಿನ ಜನರು, ಸಂಬಂಧಿಕರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here