







ಮರ್ದಾಳ: ತೋಟಕ್ಕೆ ಮೇಯಲು ಬಿಟ್ಟಿದ್ದ ವೇಳೆ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿದ್ದ ದನವೊಂದನ್ನು ಸ್ಥಳೀಯ ನಾಗರಿಕರು ಸೇರಿ ರಕ್ಷಿಸಿದ ಘಟನೆ ಮರ್ದಾಳ ಸಮೀಪದ ತುಂಬ್ಯ ಎಂಬಲ್ಲಿ ಜೂ.4ರಂದು ನಡೆದಿದೆ.


ತುಂಬ್ಯ ನಿವಾಸಿ ಗೋಪಾಲ ಭಟ್ ಎಂಬವರ ತೋಟದಲ್ಲಿ ಮೇಯಲು ಬಿಟ್ಟಿದ್ದ ದನ ತೋಟದಲ್ಲಿನ ಕೆರೆಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿತ್ತು. ಸುದ್ದಿ ತಿಳಿದ ಮರ್ದಾಳದ ವರ್ತಕರು, ಆಟೋ ಚಾಲಕರು, ಮೆಸ್ಕಾಂ ಪವರ್‌ಮ್ಯಾನ್‌ಗಳು ಸ್ಥಳಕ್ಕೆ ತೆರಳಿ ದನವನ್ನು ಕೆರೆಯಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ. ಸ್ಥಳೀಯ ನಿವಾಸಿ ಸಂತೋಷ್‌ರವರು ಕೆರೆಗೆ ಇಳಿದು ದನಕ್ಕೆ ಹಗ್ಗಕಟ್ಟಿ ಮೇಲಕ್ಕೆ ಎಳೆಯಲು ಸಹಕಾರ ನೀಡಿದರು. ಮೆಸ್ಕಾಂ ಪವರ್‌ಮ್ಯಾನ್‌ಗಳು ಹಗ್ಗ ಹಾಗೂ ಇತರೇ ಸಲಕರಣೆ ನೀಡಿ ಸಹಕರಿಸಿದರು. ಸ್ಥಳೀಯ ನಿವಾಸಿಗಳಾದ ಉದಯಭಟ್, ಆಂಡ್ರೋಸ್, ಜನಾರ್ದನ, ಜಗದೀಶ್ ರೈ, ಯಲ್ಲಪ್ಪ, ಆನಂದ, ಬಾಲಕೃಷ್ಣ ಗೌಡ, ಉಮೇಶ, ನಂದನ್, ಸುಂದರ ಗೌಡ, ವಿನೋದ್, ಲತೀಫ್ ಮತ್ತಿತರರು ಸಹಕರಿಸಿದರು.













