







ಸುಬ್ರಹ್ಮಣ್ಯ : ಭಾರತದ ಶಿಕ್ಷಣ ಸಚಿವಾಲಯದ ವತಿಯಿಂದ ರಾಷ್ಟ್ರೀಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( NCERT ) ಯ ಮಾರ್ಗದರ್ಶನದಲ್ಲಿ ನಡೆಸುವ NMMS ಪರೀಕ್ಷೆಯಲ್ಲಿ ಕೊಣಾಜೆ ಕಡ್ಯ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯರಾದ ತೀರ್ಥ ಕೆ (ಗುಜ್ಜಲ ರಾಮಣ್ಣ ಆಚಾರಿ ಮತ್ತು ಪ್ರೇಮಲತಾ ಇವರ ಪುತ್ರಿ) ಮತ್ತು ಹವ್ಯ (ಸಾಕೋಟೆಜಾಲು ಜನಾರ್ದನ ಮತ್ತು ರುಕ್ಮಿಣಿ ಇವರ ಪುತ್ರಿ) ತೇರ್ಗಡೆಯಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಇವರನ್ನು ಶಾಲಾ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಕೆ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣಪ್ಪ ಗೌಡ ಹಾಕೋಟೆಕಾನ ಅಭಿನಂದಿಸಿದ್ದಾರೆ.












