







ಆನಡ್ಕ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆನಡ್ಕ ಇಲ್ಲಿ 2026-27ನೇ ಸಾಲಿನ ಶಾಲಾ ಮಂತ್ರಿಮಂಡಲವನ್ನು ವಿನೂತನ ರೀತಿಯಲ್ಲಿ ರಚಿಸಲಾಯಿತು.4ನೇ ತರಗತಿಯಿಂದ 7ನೇ ತರಗತಿಯ ವಿದ್ಯಾರ್ಥಿಗಳು ಇವಿಎಂ ಮಾದರಿಯ ಮತಯಂತ್ರದ ಮೂಲಕ ಮತ ಚಲಾಯಿಸಿ ತಮ್ಮ ನಾಯಕರನ್ನು ಆರಿಸಿದರು.ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ಲಿಖಿತ್ ಹಾಗೂ ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಪವನ್ ಬಹುಮತದಿಂದ ಆಯ್ಕೆಯಾದರು.



ಉಳಿದಂತೆ ಶಿಕ್ಷಣ ಮಂತ್ರಿಯಾಗಿ ತನ್ವಿ, ಉಪಮಂತ್ರಿಯಾಗಿ ಲಾವಣ್ಯ, ಸಾಂಸ್ಕೃತಿಕ ಮಂತ್ರಿಯಾಗಿ ಅದಿತಿ ಹಾಗೂ ವಿಸ್ಮ ಗನನ್ಯ, ಆರೋಗ್ಯ ಮಂತ್ರಿಯಾಗಿ ಅನುಷ್ಯ ಹಾಗೂ ಚೈತನ್ಯ, ಆಹಾರ ಮಂತ್ರಿಯಾಗಿ ತ್ರಿಶಾ ಹಾಗೂ ಜನನಿ, ಕ್ರೀಡಾ ಮಂತ್ರಿಯಾಗಿ ಹವೀಶ್ ಹಾಗೂ ದುವಿತ್, ರಕ್ಷಣಾ ಮಂತ್ರಿಯಾಗಿ ಲೋಲಾಕ್ಷ ಹಾಗೂ ಭರತ್, ನೀರಾವರಿ ಮಂತ್ರಿಯಾಗಿ ಶನ್ಮಿತ್ ಹಾಗೂ ಹಿತೇಶ್, ವಾರ್ತಾ ಮಂತ್ರಿಯಾಗಿ ವಿಶ್ಮ ಹಾಗೂ ಅದಿತಿ, ಸ್ವಚ್ಛತಾ ಮಂತ್ರಿಯಾಗಿ ಗನನ್ಯ ಹಾಗೂ ಮೇಘಶ್ರೀ, ಗ್ರಂಥಾಲಯ ಮಂತ್ರಿಯಾಗಿ ಸ್ವಾತಿ ಹಾಗೂ ರಶ್ಮಿ, ತೋಟಗಾರಿಕಾ ಮಂತ್ರಿಯಾಗಿ ಶರ್ಮಿತ್ ಹಾಗೂ ಹಿತೇಶ್, ವಿರೋಧ ಪಕ್ಷದ ನಾಯಕಿಯಾಗಿ ತನ್ವಿ ಆಯ್ಕೆಯಾದರು.ಜಿಪಿಟಿ ಶಿಕ್ಷಕ ಸುನಿಲ್ ಎಂ.ಆರ್ ವಿನೂತನ ರೀತಿಯಲ್ಲಿ ಮತದಾನ ವ್ಯವಸ್ಥೆಯನ್ನು ಅಳವಡಿಸಿದ್ದರು. ಮುಖ್ಯ ಶಿಕ್ಷಕಿ ಹರಿಣಾಕ್ಷಿ ಎಂ ಅಭ್ಯರ್ಥಿಗಳಿಗೆ ಶುಭ ಹಾರೈಸಿ ನಿಯಮಗಳನ್ನು ತಿಳಿಸಿದರು. ಶಿಕ್ಷಕಿಯರಾದ ವಿಶಾಲಾಕ್ಷಿ, ಸೌಮ್ಯ, ಗೀತಾ ಹಾಗೂ ಪೂರ್ಣಿಮಾ ಸಹಕರಿಸಿದರು.












