







ಪುತ್ತೂರು: ಪುತ್ತೂರಿನ ಹೃದಯ ಭಾಗದ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ 2025-26ನೇ ಸಾಲಿನ ಎನ್.ಎಮ್.ಎಮ್.ಎಸ್. 8ನೇ ತರಗತಿಯ ವಿದ್ಯಾರ್ಥಿ ವೇತನ ಪರೀಕ್ಷೆಗೆ ತರಬೇತಿಯನ್ನು ಪಡೆದುಕೊಂಡ 2 ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುತ್ತಾರೆ.



ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ತಿಂಗಳಾಡಿಯ ನಾರಾಯಣ ಹಾಗೂ ಕುಸುಮ ದಂಪತಿಗಳ ಸುಪುತ್ರಿ ಪ್ರತಿಭಾ ಎನ್ ಇವರು 93 ಅಂಕವನ್ನು ಪಡೆದಿರುತ್ತಾರೆ.ಇವರು ಪ್ರಸ್ತುತ ತಿಂಗಳಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶ್ಯಾನವಾಡ ಗ್ರಾಮದ ಮಲ್ಲಪ್ಪ ಕೆಂಪಣ್ಣವರ ಮತ್ತು ಸುಮಂಗಲ ಇವರ ಸುಪುತ್ರಿ ಮಧುಶ್ರಿ ಮಲ್ಲಪ್ಪ ಕೆಂಪಣ್ಣವರ ಇವರು 85 ಅಂಕವನ್ನು ಪಡೆದು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಪ್ರಸ್ತುತ ಹಾರಾಡಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಮುಖ್ಯೋಪಾಧ್ಯಯರಾದ ಪ್ರಮೀಳಾ ಎನ್.ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



2026-27ನೇ ಸಾಲಿನ ಎನ್.ಎಮ್. ಎಮ್. ಎಸ್. 8ನೇ ತರಗತಿಯ ಪ್ರವೇಶ ಪರೀಕ್ಷೆಗೆ ತರಬೇತಿ ಶಿಬಿರವು ಪ್ರಾರಂಭಗೊಂಡಿದೆ ಎಂದು ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್‌ನಾಥ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಸಂಸ್ಥೆಯ ಕಛೇರಿಗೆ ಮುಖತಃ ಅಥವಾ ದೂರವಾಣಿ ಮುಖಾಂತರ ಸಂಸ್ಥೆಯ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 9900109490 , 8123899490 ಸ್ಥಳ: ಪ್ರಗತಿ ಸ್ಟಡಿ ಸೆಂಟರ್, 2ನೇ ಮಹಡಿ, ಧರ್ಮಸ್ಥಳ ಬಿಲ್ಡಿಂಗ್, ಮುಖ್ಯರಸ್ತೆ ಪುತ್ತೂರು, 574201 ದ.ಕ., ಕಛೇರಿ ಬೆಳಗ್ಗೆ ಗಂಟೆ 9.30ರಿಂದ ಸಂಜೆ 6ರವರೆಗೆ ತೆರೆದಿರುತ್ತದೆ.









