







ಪುತ್ತೂರು: ಹಲವಾರು ಹೊಸತನಗಳೊಂದಿಗೆ ಎಂಟು ವರುಷಗಳ ಬಳಿಕ ಇದೀಗ ಮತ್ತೆ ಜಂಬೋ ಸರ್ಕಸ್ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಆರಂಭಗೊಂಡಿದ್ದು, ಜನ ಮನ ಸೂರೆಗೊಳಿಸುವ ಪ್ರದರ್ಶನ ನೀಡುವ ಮೂಲಕ ಕಲಾಭಿಮಾನಿಗಳನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.



ಜಂಬೋ ಸರ್ಕಸ್ ಹಲವಾರು ವರುಷಗಳ ಇತಿಹಾಸವಿರುವ ಒಂದು ಸರ್ಕಸ್ ತಂಡವಾಗಿದ್ದು, ಪರಿಣತಿ ಹೊಂದಿದ ಕಲಾವಿದರು ಈ ತಂಡದಲ್ಲಿದ್ದು ಥ್ರಿಲ್ಲಿಂಗ್ ಹೆಚ್ಚಿಸುವ ಆಟಗಳು ರೋಮಾಂಚಕ ಚಟುವಟಿಕೆಗಳು, ನಾಯಿಗಳ ಸಾಹಸ, ಸೈಕ್ಲಿಂಗ್, ಕಾಮಿಡಿ ಸೇರಿದಂತೆ ಸಾಕಷ್ಟು ಮನರಂಜನೆಗಳನ್ನು ನೀವು ಇಲ್ಲಿ ಕಾಣಬಹುದಾಗಿದೆ. ಮಕ್ಕಳ ಸಹಿತ ಹಿರಿಯರ ವರೆಗೂ ನೋಡಲೇ ಬೇಕಾದ ರೋಮಾಂಚನಕಾರಿ ಆಟಗಳು ಇದರಲ್ಲಿದೆ. ಈಗಾಗಲೇ ಪ್ರದರ್ಶನ ಕಂಡ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ.




ಶನಿವಾರ, ಭಾನುವಾರ ಮೂರು ಪ್ರದರ್ಶನ: ಉಳಿದ ದಿನ ಎರಡು ಪ್ರದರ್ಶನ
ಶನಿವಾರ, ಭಾನುವಾರ ಮದ್ಯಾಹ್ನ 1 ಗಂಟೆ, ಸಾಯಂಕಾಲ 4 ಗಂಟೆ, ರಾತ್ರಿ 7ಗಂಟೆಗೆ ಹೀಗೆ ಮೂರು ಪ್ರದರ್ಶನ ನಡೆಯಲಿದೆ. ಉಳಿದಂತೆ ಸೋಮವಾರದಿಂದ ಶುಕ್ರವಾರದ ವರೆಗೆ ಎರಡು ಸಾಯಂಕಾಲ 4 ಗಂಟೆ, ರಾತ್ರಿ 7ಗಂಟೆಗೆ ಪ್ರದರ್ಶನ ನಡೆಯಲಿದೆ. ರೂ.300 ಕ್ಕೆ ಅಡ್ವಾನ್ಸ್ ಬುಕ್ಕಿಂಗ್ ನಡೆಯಲಿದ್ದು, ವಿಶೇಷ ಆಕರ್ಶಣೆಯಾಗಿ ರೊಬೋಟಿಕ್ ಅನಿಮಲ್ ಪ್ರದರ್ಶನವಿದೆ. 2 ಗಂಟೆಗಳ ಕಾಲ ನಡೆಯಲಿರುವ ಪ್ರದರ್ಶನದಲ್ಲಿ ಸುಮಾರು 30ಕ್ಕೂ ಅಧಿಕ ಆಟಗಳು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8667013077, 7907089704ಯನ್ನು ಸಂಪರ್ಕಿಸಬಹುದಾಗಿದೆ.











