ಪುದು ಶಾಲೆಯಲ್ಲಿ ಹೊಸ ಶೈಕ್ಷಣಿಕ ವರ್ಷಾರಂಭ : ಪ್ರಗತಿ ಪತ್ರ, ಬ್ಯಾಗ್ ವಿತರಣೆ

0

ಪುತ್ತೂರು: ಕರ್ನಾಟಕ ಮೌಲಾನಾ ಆಝಾದ್ ಪಬ್ಲಿಕ್ ಸ್ಕೂಲ್ ಪುದು ಮಾರಿಪಳ್ಳ ಇಲ್ಲಿ 2026-27ನೇ ಸಾಲಿನ ಎಲ್‌ಕೆಜಿ, ಯುಕೆಜಿ ಶೈಕ್ಷಣಿಕ ವರ್ಷದ ಮೊದಲ ದಿನದ ಸಂಭ್ರಮಾಚರಣೆ ಜೂ.8ರಂದು ನಡೆಯಿತು.

ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. “ಶಿಕ್ಷಕರ ಜೊತೆ ಪೋಷಕರು ಕೈ ಜೋಡಿಸಿದರೆ ಮಾತ್ರ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ” ಎಂದು ತಿಳಿಸಿ ವಿದ್ಯಾರ್ಥಿಗಳನ್ನು ಹರಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಉಮರುಲ್ ಫಾರೂಕ್ ಮಾತನಾಡಿ, “ಎಲ್‌ಕೆಜಿಯಿಂದ ಯುಜಿ ವರೆಗೂ ಒಂದೇ ಸಂಸ್ಥೆಯಲ್ಲಿ ಶಿಕ್ಷಣ ಸಿಗುತ್ತದೆ” ಎಂಬ ಭರವಸೆ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here