







ಅಧ್ಯಕ್ಷೆ -ಸುಪ್ರಿತಾ, ಕಾರ್ಯದರ್ಶಿ -ವಸಂತಿ ಜೆ., ಕೋಶಾಧಿಕಾರಿ-ಪುರಂದರ


ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ಇದರ ನೆಲ್ಯಾಡಿ ವಲಯ ಭಜನಾ ಪರಿಷತ್ನ ಅಧ್ಯಕ್ಷರಾಗಿ ಸುಪ್ರಿತಾ ರವಿಚಂದ್ರ ಹೊಸವಕ್ಲು, ಕಾರ್ಯದರ್ಶಿಯಾಗಿ ವಸಂತಿ ಜೆ., ಕೋಶಾಧಿಕಾರಿಯಾಗಿ ಪುರಂದರ ಆಯ್ಕೆಯಾಗಿದ್ದಾರೆ.




ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಗೀತಾ, ಜೊತೆ ಕಾರ್ಯದರ್ಶಿಯಾಗಿ ಯಶ್ವಿನಿ ಅವರು ಆಯ್ಕೆಯಾದರು. ಕಡಬ ತಾಲೂಕು ಭಜನಾ ಪರಿಷತ್ನ ಅಧ್ಯಕ್ಷ ಸುಂದರ ಗೌಡ ಒಗ್ಗು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಭಜನಾ ಪರಿಷತ್ನ ಗೌರವ ಸಲಹೆಗಾರ ಸತ್ಯನಾರಾಯಣ ಹೆಗ್ಡೆ, ಸಮನ್ವಯಾಧಿಕಾರಿ ಸಂತೋಷ್ಕುಮಾರ್, ವಲಯದ ಎಲ್ಲಾ ಭಜನಾ ಮಂಡಳಿಗಳ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ಭಜನಾ ಪರಿಷತ್ನ ಸದಸ್ಯರು ಉಪಸ್ಥಿತರಿದ್ದರು. ನೆಲ್ಯಾಡಿ ವಲಯದ ಮೇಲ್ವಿಚಾರಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಸೇವಾಪ್ರತಿನಿಧಿ ಸುಮನಾ ಎಸ್.ಸ್ವಾಗತಿಸಿದರು. ವೇದಾ ಪಿ.ವಂದಿಸಿದರು.









