






ವಿಟ್ಲ: ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ಮಾಣಿ ವಲಯದ ನೇರಳಕಟ್ಟೆ ಹೊಸಬೆಳಕು ಜ್ಞಾನ ವಿಕಾಸ ಕೇಂದ್ರದಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಿತು.



ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾದ ರಾಜಾರಾಮ ಶೆಟ್ಟಿ ಕೋಲ್ಪೆ ಗುತ್ತು ತಂಬಾಕಿನಿಂದ ಆಗುವ ದುಷ್ಪರಿಣಾಮ ಕುರಿತು ಮಾಹಿತಿ ನೀಡಿದರು. ತಾಲೂಕಿನ ಯೋಜನಾಧಿಕಾರಿಗಳು ವಿವಿಧ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.ಜನಜಾಗೃತಿ ಸದಸ್ಯರಾದ ತನಿಯಪ್ಪ ಗೌಡ, ಮೇಲ್ವಿಚಾರಕಿ, ಆಶಾಪಾರ್ವತಿ ಒಕ್ಕೂಟದ ಅಧ್ಯಕ್ಷ ರಾದ ಲೀಲಾವತಿ ಉಪಸ್ಥಿತರಿದ್ದರು. ಕೇಂದ್ರದ ಸದಸ್ಯೆ ನೀತಾ ಸ್ವಾಗತಿಸಿ, ಸೇವಾ ಪ್ರತಿನಿಧಿ ಶ್ವೇತಾ ವಂದಿಸಿದರು.













