







ಪುತ್ತೂರು:ನಗರಸಭೆ ವ್ಯಾಪ್ತಿಯ ಸಿಂಗಾಣಿ ಎಂಬಲ್ಲಿ ತೋಟದ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜೂ.9ರಂದು ನಡೆದಿದೆ.


ಸಿಂಗಾಣಿ ನಿವಾಸಿ ವಲೇರಿಯನ್ ಡಿ’ಸೋಜ(62ವ) ಮೃತಪಟ್ಟವರು.ಅವರು ಹುಲ್ಲು ತರಲೆಂದು ತೋಟಕ್ಕೆ ಹೋದವರು ಮನೆಗೆ ವಾಪಸಾಗದೆ ಇದ್ದುದರಿಂದ ಪುತ್ರ
ಹುಡುಕಿಕೊಂಡು ಹೋದಾಗ ಕೆರೆಯ ಬಳಿ ಚಪ್ಪಲಿ, ಕತ್ತಿ ಕಂಡಿತ್ತು.ಸಂಶಯಗೊಂದು ಅಗ್ನಿಶಾಮಕ ದಳದವರ ಸಹಾಯದಿಂದ ಕೆರೆಯಲ್ಲಿ ಹುಡುಕಾಡಿದಾಗ ವಲೇರಿಯನ್ ಅವರ ಮೃತ ದೇಹ ಪತ್ತೆಯಾಗಿದೆ. ಅವರು ಆಕಸ್ಮಿಕವಾಗಿ ತೋಟದ ಕೆರೆಗೆ ಕಾಲು ಜಾರಿ ಬಿದ್ದು ಸಾವಿಗೀಡಾಗಿರುವುದಾಗಿ ಮೃತರ ಪುತ್ರ ವಿನಿಲ್ ಡಿ’ಸೋಜ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













