






ಬಡಗನ್ನೂರು : ಬೆಳ್ತಂಗಡಿ ಲಾಯಿಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ತ್ರೈಮಾಸಿಕ ಸಭೆಯು ಮಠದ ಆವರಣದಲ್ಲಿ ಜೂ 11 ರಂದು ನಡೆಯಿತು.


ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಆಗಸ್ಟ್ ತಿಂಗಳಲ್ಲಿ ನಡೆಯುವ ಆರಾಧನಾ ಮಹೋತ್ಸವವನ್ನು ಅತ್ಯಂತ ವಿಜ್ರಂಭಣೆಯಿಂದ ನಡೆಸಲು ಸಹಕರಿಸುವಂತೆ ಮನವಿ ಮಾಡಿದರು.



ಟ್ರಸ್ಟಿ ಬಿಎ ಕುಮಾರ ಹೆಗ್ಡೆ ಮಾತನಾಡಿ ಈ ವರ್ಷದಿಂದ ಕನಿಷ್ಠ 10 ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಕ್ಷೇತ್ರದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮ ಅಯೋಜಿಸುವಂತೆ ಸಲಹೆ ನೀಡಿದರು.
ಸಭೆಯಲ್ಲಿ ಸದಸ್ಯರಾದ ವಿಶ್ವನಾಥ ಆರ್ ನಾಯಕ್ ಮಹಾಬಲ ಶೆಟ್ಟಿ, ಸೋಮೇಗೌಡ, ಮೋಹನ್ ರಾವ್ ಉಜಿರೆ, ಜಯಂತ ರಾಘವೇಂದ್ರ, ನಗರ,ವಿಶೇಷ ಆಹ್ವಾನಿತರಾದ ಕೃಷ್ಣ ಶೆಟ್ಟಿ, ಬಂಗಾರು ರಾಘವೇಂದ್ರ ನಗರ ಮುಖ್ಯ ಅರ್ಚಕ ರಾಘವೇಂದ್ರ ಬಾಂಗೀನಾಯ, ಸಲಹೆಗಾರ ಮಂಜುನಾಥ ರೈ, ಮತ್ತಿತರರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ವಸಂತ ಸುವರ್ಣ ಸ್ವಾಗತಿಸಿ ವರದಿಯನ್ನು ಯಾಚಿಸಿ ವಂದಿಸಿದರು. ಕೋಶಾಧಿಕಾರಿ ಶ್ರವಣ್ ರಾಜ್ ಕ್ಷೇತ್ರದ ಲೆಕ್ಕಪತ್ರ ಮಂಡಿಸಿದರು.










