







ಆಲಂಕಾರು: ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ಕೊಯಿಲ ರಾಮಕುಂಜ ಬಿಲ್ಲವ ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಜೂ. 14 ರಂದು ರಾಮಕುಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ಪುತ್ತೂರು ಬಿಲ್ಲವ ಸಂಘದ ಜೊತೆ ಕಾರ್ಯದರ್ಶಿ ಪುರುಷೋತ್ತಮ ಬರೆಂಬೆಟ್ಟು ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.ನಂತರ ವರದಿ ವಾಚನ ಮಂಡಿಸಿ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.



ಕೊಯಿಲ, ರಾಮಕುಂಜ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಸಂಜೀವ ಪೂಜಾರಿ ಮಾರಂಗ , ಕಡಬ ಬಿಲ್ಲವ ಸಂಘದ ಉಪಾಧ್ಯಕ್ಷ ರವಿಮಾಯಿಲ್ಗ, ಪುತ್ತೂರು ತಾಲ್ಲೂಕು ಆಲಂಕಾರು ವಲಯ ಸಂಚಾಲಕ ದಿನೇಶ್ ಕೇಪುಳು, ಅಲಂಕಾರು ಗ್ರಾಮ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಪಟ್ಟೆಮಜಲು, ರಾಮಕುಂಜ ಬಿಲ್ಲವ ಗ್ರಾಮ ಸಮಿತಿಯ ಗೌರವಾಧ್ಯಕ್ಷ ವೇಣುಗೋಪಾಲ ಅಂಬ, ರಾಮಕುಂಜ ಬಿಲ್ಲವ ಸಮಿತಿಯ ಮಹಿಳಾ ಅಧ್ಯಕ್ಷೆ ವಸಂತಿ ಕಲ್ಕಾಡಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಹೇಮಾವತಿ ಆತೂರು ಸ್ವಾಗತಿಸಿ ಕಾವ್ಯ ಶ್ರೀ ಮಾರಂಗ ಕಾರ್ಯಕ್ರಮ ನಿರೂಪಿಸಿ, ಪ್ರೀಯ ಸುಣ್ಣಾಡಿ ವರದಿ ವಾಚಿಸಿ ವಸಂತಿ ಕಲ್ಕಾಡಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಸಂತೋಷ್ ಸುಣ್ಣಾಡಿ ಕೊಡುಗೆಯಾಗಿ ನೀಡಿದರು ಕಾರ್ಯಕ್ರಮ ದಲ್ಲಿ ಕೊಯಿಲ ರಾಮಕುಂಜ ಬಿಲ್ಲವ ಗ್ರಾಮ ಸಮಿತಿಯ ಸರ್ವಸದಸ್ಯರು ಉಪಸ್ಥಿತರಿದ್ದರು.










