







ಪೆರಿಯಡ್ಕ: ಸರ್ವೋದಯ ಪ್ರೌಢಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ರಚನೆ ಕಾರ್ಯಕ್ರಮ ಜೂನ್ 10ರಂದು ನಡೆಯಿತು.ಜನನಿ ಬಿ.ಎಸ್. ಶಾಲಾ ನಾಯಕಿಯಾಗಿ ಹಾಗೂ ಕೌಶಿಕ ಉಪನಾಯಕಿನಾಗಿ ಆಯ್ಕೆಯಾದರು.


ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮಿ ಪಿ. ಅವರು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಶಿಕ್ಷಕರಾದ ಶಕುಂತಲಾ ಕೆ., ಭವ್ಯ ವೈ. ಹಾಗೂ ನಿತ್ಯಾ ಬಿ. ಅವರು ಚುನಾವಣಾಧಿಕಾರಿಗಳಾಗಿ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಮೋಹನ ಗೌಡ ಹೆಚ್. ಅವರು ಚುನಾವಣಾ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.













