ಕಾಂಗ್ರೆಸ್ ಮುಖಂಡ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಅವರಿಂದ ಹಲವರಿಗೆ ಉಚಿತ ಕೊಡೆ ವಿತರಣೆ

0

ಪುತ್ತೂರು: ಅರಿಯಡ್ಕ ಗ್ರಾಮದಲ್ಲಿ ಸದಾ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಅವರು ಹಲವರಿಗೆ ಕೊಡೆ ವಿತರಿಸುವ ಮೂಲಕ ತಮ್ಮ ಸಮಾಜ ಸೇವಾ ಕಾರ್ಯವನ್ನು ಮುಂದುವರಿಸಿದ್ದಾರೆ.

ವಿದ್ಯಾರ್ಥಿಗಳಿಗೆ, ಗ್ರಾ.ಪಂ ಸ್ವಚ್ಚತಾ ಸೇನಾನಿಗಳಿಗೆ, ವೃದ್ಧರಿಗೆ ಸೇರಿದಂತೆ ಹಲವರಿಗೆ ಕೊಡೆ ಅವರು ವಿತರಿಸಿದ್ದು ಕೊಡೆ ಸ್ವೀಕರಿಸಿದವರು ಕೃತಜ್ಞತೆ ಸಲ್ಲಿಸಿದ್ದಾರೆ.

ಇತ್ತೀಚೆಗೆ ರಸ್ತೆ ಬದಿಯಲ್ಲಿ ವೃದ್ಧ ಮಹಿಳೆಯೊಬ್ಬರು ಮಳೆಗೆ ನೆನೆದುಕೊಂಡು ಹೋಗುತ್ತಿದ್ದ ವೇಳೆ ಅದನ್ನು ಗಮನಿಸಿದ ಇಕ್ಬಾಲ್ ಹುಸೇನ್ ಅವರು ಆ ವೃದ್ಧೆಯನ್ನು ವಿಚಾರಿಸಿದ್ದು ಈ ವೇಳೆ ನನ್ನಲ್ಲಿ ಕೊಡೆ ಇಲ್ಲ, ಕೊಡೆ ತೆಗೆಯಲು ಹಣ ಇಲ್ಲ ಎಂದು ತಿಳಿಸಿದ್ದರು, ನೀವು ಮಳೆಗೆ ನೆನೆದುಕೊಂಡು ಹೋಗುವುದು ಬೇಡ ನಾನು ಕೊಡೆ ಕೊಡುತ್ತೇನೆ ಎಂದು ಹೇಳಿದ ಇಕ್ಬಾಲ್ ಹುಸೇನ್ ಅವರು ಕೆಲವೇ ಹೊತ್ತಲ್ಲಿ ಅವರಿಗೆ ಹೊಸ ಕೊಡೆಯನ್ನು ನೀಡಿದ್ದಾರೆ. ಆ ಬಳಿಕ ಗ್ರಾಮ ವ್ಯಾಪ್ತಿಯಲ್ಲಿ ಹಲವರಿಗೆ ಕೊಡೆ ವಿತರಿಸಿ ಸುದ್ದಿಯಾಗಿದ್ದಾರೆ. ಜನರಿಗೆ ಉಪಕಾರ ಮಾಡುವುದು ನಮ್ಮ ಧರ್ಮ, ಹಾಗಾಗಿ ನನ್ನಿಂದಾಗುವ ಅಳಿಲು ಸೇವೆಯನ್ನು ಸಮಾಜಕ್ಕೆ ನೀಡುತ್ತಿದ್ದೇನೆ ಎಂದು ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here