






ಆಲಂಕಾರು: ಗ್ರಾ.ಪಂ ವ್ಯಾಪ್ತಿಯ ಘನ ತ್ಯಾಜ್ಯ ಘಟಕದ ಬಾಗಿಲಿನ ಹತ್ತಿರ ಕಸದ ಮೂಟೆಗಳನ್ನು ತಂದಿಡಲಾಗಿದ್ದ ಪ್ರಕರಣದಲ್ಲಿ, ಅಲ್ಲಿ ತ್ಯಾಜ್ಯ ತಂದಿಟ್ಟವರ ಮನೆಗೆ ಗ್ರಾ.ಪಂ ಅಭಿವೃದ್ಧಿ ಅಽಕಾರಿ ಮತ್ತು ಸಂಜೀವಿನಿ ಒಕ್ಕೂಟದ ಪದಾಽಕಾರಿಗಳು ತೆರಳಿ ದಂಡ ಪಾವತಿಸಲು ಸೂಚನೆ ನೀಡಿದ ಘಟನೆ ನಡೆದಿದೆ.


ಆಲಂಕಾರು ಗ್ರಾ.ಪಂ ಸ್ವಚ್ಚತೆಗೆ ಅಧ್ಯತೆ ನೀಡುತ್ತಿದ್ದು ಜೂ.15 ರಂದು ಬೆಳಿಗ್ಗೆ ಸಂಜೀವಿನಿ ಒಕ್ಕೂಟದ ಸದಸ್ಯರು ಘನತ್ಯಾಜ್ಯ ಘಟಕಕ್ಕೆ ಬಂದಿದ್ದ ವೇಳೆ ಘನ ತ್ಯಾಜ್ಯ ಘಟಕದ ಬಾಗಿಲಿನ ಹತ್ತಿರ ಕಸದ ಮೂಟೆಗಳು ಕಂಡು ಬಂದಿದ್ದವು.ಇದನ್ನು ಗಮನಿಸಿದ ಸಂಜೀವಿನಿ ಒಕ್ಕೂಟದ ಸದಸ್ಯರು ಆಲಂಕಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತ ಕೆ ಅವರಿಗೆ ಮಾಹಿತಿ ನೀಡಿದರು.ನಂತರ ತ್ಯಾಜ್ಯವನ್ನು ಪರೀಶಿಲನೆ ನಡೆಸಿದಾಗ ಅದರಲ್ಲಿ ದೊರೆತ ನೋಟೀಸೊಂದರಲ್ಲಿದ್ದ ವಿಳಾಸ ಆಧರಿಸಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತ.ಕೆ ಮತ್ತು ಸಿಬ್ಬಂದಿ ಕರಿಯಪ್ಪ ಮತ್ತು ಸಂಜೀವಿನಿ ಒಕ್ಕೂಟದ ಪದಾಽಕಾರಿಗಳು ಭಾಸ್ಕರ ಪಟ್ಟೆ ಎಂಬವರ ಮನೆಗೆ ತೆರಳಿದರು. ತ್ಯಾಜ್ಯದ ಬಗ್ಗೆ ವಿಷಯ ಪ್ರಸ್ತಾಪಿಸಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸುಜಾತ ಕೆ.ಯವರು, ರೂ.2000 ದಂಡ ಪಾವತಿಸುವಂತೆ ಭಾಸ್ಕರ ಪಟ್ಟೆ ಅವರಿಗೆ ಸೂಚನೆ ನೀಡಿದ್ದಾರೆ. ದಂಡ ಪಾವತಿಸದಿದ್ದಲ್ಲಿ ಪೊಲೀಸ್ ಇಲಾಖೆಯಲ್ಲಿ ದೂರು ದಾಖಲಿಸಲಾಗುವುದೆಂದು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಸುಜಾತ.ಕೆ ಯವರು ತಿಳಿಸಿದ್ದಾರೆ.













