






ಪುತ್ತೂರು: ನಗರಸಭೆ ಸಹಯೋಗದಲ್ಲಿ ಸಾಹಸ ಸಂಸ್ಥೆ ಬೆಂಗಳೂರು ಹಾಗೂ ಎಚ್ಡಿಬಿ ಫೈನಾನ್ಶಿಯಲ್ ಸರ್ವಿಸ್ನ ಆರ್ಥಿಕ ನೆರವಿನೊಂದಿಗೆ ಪರ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರು ಪರಿಸರ ದಿನಾಚರಣೆ ಪ್ರಯುಕ್ತ ಸ್ವಚ್ಛ ಅಭಿಯಾನ ಹಾಗೂ ಕೈತೋಟ ನಿರ್ಮಾಣ ಕಾರ್ಯಕ್ರಮ ನಡೆಯಿತು.


ತ್ಯಾಜ್ಯ ಬಿಸಾಡಲಾಗಿದ್ದ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಅಲ್ಲಿ ಕೈತೋಟ ನಿರ್ಮಿಸಿ ಗಿಡಗಳನ್ನು ನೆಡಲಾಯಿತು. ಜೊತೆಗೆ ವಿದ್ಯಾರ್ಥಿಗಳಿಗೆ ತ್ಯಾಜ್ಯ ನಿರ್ವಹಣೆ ಕುರಿತು ಅರಿವು ಮೂಡಿಸಲಾಯಿತು. ಪೌರಾಯುಕ್ತೆ ವಿದ್ಯಾ ಎಂ. ಕಾಳೆ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.



ಕಾರ್ಯಕ್ರಮದಲ್ಲಿ ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಶಭರೀನಾಥ ರೈ, ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್, ಎಚ್ಡಿಬಿ ಫೈನಾನ್ಶಿಯಲ್ ಸರ್ವಿಸ್ನ ಶಾಖಾ ವ್ಯವಸ್ಥಾಪಕ ಅಭಿಷೇಕ್ ಹಾಗೂ ಸಹೋದ್ಯೋಗಿಗಳು, ಪರ್ಲಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿದ್ಯಾರ್ಥಿಗಳು, ನಗರಸಭೆಯ ಸಮುದಾಯ ಪ್ರೇರೇಪಕರು, ಸ್ಯಾನಿಟರಿ ಮೇಲ್ವಿಚಾರಕರು, ಚಾಲಕರು ಹಾಗೂ ಸಾಹಸ ಸಂಸ್ಥೆಯ ಸಂಯೋಜಕ ಅನಂತ ದೇಶಭಂಡಾರಿ, ಮೇಲ್ವಿಚಾರಕರಾದ ಗಣೇಶ, ಇರ್ಫಾನ್ ಉಪಸ್ಥಿತರಿದ್ದರು.










