ಗಂಟಲಿನ ಗಡ್ಡೆ ಶಸ್ತ್ರಚಿಕಿತ್ಸೆ ಬಳಿಕ ವ್ಯಕ್ತಿಯ ಸಾವು ಪ್ರಕರಣ: ಡಾ.ಎಂ.ಕೆ.ಪ್ರಸಾದ್‌ ನಿರ್ದೋಷಿ

0

ಪುತ್ತೂರು: ಗಂಟಲಿನ ಗಡ್ಡೆ ಶಸ್ತ್ರಚಿಕಿತ್ಸೆ ಘಟನೆಗೆ ಬಳಿಕ ವ್ಯಕ್ತಿಯೋರ್ವರ ಸಾವು ಸಂಭವಿಸಿದ್ದ ಸಂಬಂಧಿಸಿ,ನಿರ್ಲಕ್ಷ್ಯತನ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ವೈದ್ಯ ಡಾ.ಎಂ.ಕೆ.ಪ್ರಸಾದ್ ಭಂಡಾರಿ ಅವರನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.


2017ರ ಫೆ.7ರಂದು ಇಲ್ಲಿನ ಆದರ್ಶ ಆಸ್ಪತ್ರೆಯಲ್ಲಿ, ಗಂಟಲಿನ ಚಿಕಿತ್ಸೆಗಾಗಿ ದಾಖಲಾಗಿದ್ದ ನಾರ್ಣಪ್ಪ ಗೌಡ ಎಂಬವರಿಗೆ ಗಂಟಲಿನ ಶಸ್ತ್ರ ಚಿಕಿತ್ಸೆ ನಡೆದಿತ್ತು. ಚಿಕಿತ್ಸೆಯ ಬಳಿಕ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು.ಆ ಸಮಯ,ಶಸ್ತ್ರ ಚಿಕಿತ್ಸೆ ನಡೆದ ಭಾಗದಲ್ಲಿ ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ನಾರ್ಣಪ್ಪಗೌಡರನ್ನು ಮತ್ತೆ ಆಪರೇಶನ್ ಥಿಯೇಟರಿಗೆ ಕರೆದುಕೊಂಡು
ಹೋಗಿ ರಕ್ತಸ್ರಾವವಾಗದಂತೆ ಚಿಕಿತ್ಸೆ ಮಾಡಲಾಗಿತ್ತು.ಆ ಬಳಿಕ ಅವರಿಗೆ ಸ್ಥತಿ ಬಾರದೇ ಇದ್ದು. ಇದೇ ದೆಸೆಯಿಂದ ತೀವ್ರವಾಗಿ ಅಸ್ವಸ್ಥಗೊಂಡಿದ್ದರಿಂದ ಮರುದಿವಸ ಮಂಗಳೂರು ಇಂಡಿಯಾನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಫೆ.9ರಂದು ನಾರ್ಣಪ್ಪ ಗೌಡರು ಮೃತಪಟ್ಟಿದ್ದರು.

ಈ ಘಟನೆಗೆ ಸಂಬಂಧಿಸಿ,ಡಾ.ಎಂ.ಕೆ.ಪ್ರಸಾದ್ ಭಂಡಾರಿಯವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು. ನಾರ್ಣಪ್ಪ ಗೌಡರ ಗಂಟಲ ಗಡ್ಡೆಯ ಶಸ್ತ್ರ ಚಿಕಿತ್ಸೆ ನಡೆಸಿದ ವೇಳೆ ನಿರ್ಲಕ್ಷ್ಯತನದಿಂದ ಕುತ್ತಿಗೆಯ ಬಲಭಾಗದ ರಕ್ತನಾಳ ತುಂಡರಿಸಿದ್ದರಿಂದಲೇ ನಾರ್ಣಪ್ಪ ಗೌಡರು ಮೃತಪಟ್ಟಿರುವುದಾಗಿ ಆರೋಪಿಸಿ ಡಾ.ಎಂ.ಕೆ.ಪ್ರಸಾದ್ ಭಂಡಾರಿಯವರ ವಿರುದ್ಧ ಮೃತರ ಮನೆಯವರು ನೀಡಿದ್ದ ದೂರಿನ ಮೇರೆಗೆ ಪುತ್ತೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪುತ್ತೂರಿನ ಪ್ರಧಾನ ಸೀನಿಯರ್ ಸಿವಿಲ್ ಜಡ್ಜ್ ಮತ್ತು ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ್ ಅವರು ಪ್ರಕರಣದಲ್ಲಿ ಡಾ.ಎಂ.ಕೆ.ಪ್ರಸಾದ್ ಭಂಡಾರಿಯವರು ನಿರ್ದೋಷಿ ಎಂದು ತೀರ್ಪು ನೀಡಿದ್ದಾರೆ. ಆರೋಪಿ ಪರ ವಕೀಲರಾದ ದೇವಾನಂದ ಕೆ., ನರಸಿಂಹಪ್ರಸಾದ್ ಮತ್ತು ಚಿನ್ಮಯ್‌ ರೈ ವಾದಿಸಿದ್ದರು.

LEAVE A REPLY

Please enter your comment!
Please enter your name here