ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘ ರಚನೆ

0

 ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಕಲ್ಲಪದವು, ಉಪಾಧ್ಯಕ್ಷೆ ಪುಷ್ಪಲತಾ ಗುವೆಲ್ ಗದ್ದೆ, ಕಾರ್ಯದರ್ಶಿಯಾಗಿ ಮೋನಪ್ಪ ಕೋಡಿ

ಪಾಣಾಜೆ, ಜೂ.16: ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಜೂ.13ರಂದು ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಮಕ್ಕಳ ಪೋಷಕರ ಸಭೆ ನಡೆಯಿತು. ಸಭೆಯಲ್ಲಿ 2026-27ನೇ ಸಾಲಿನ ರಕ್ಷಕ ಶಿಕ್ಷಕ ಸಂಘ ಹಾಗೂ ಇತರ ಸಮಿತಿಗಳನ್ನು ರಚಿಸಲಾಯಿತು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಕ್ ಕಲ್ಲಪದವು, ಉಪಾಧ್ಯಕ್ಷೆಯಾಗಿ ಪುಷ್ಪಲತಾ ಗುವೆಲ್ ಗದ್ದೆ ಹಾಗೂ ಕಾರ್ಯದರ್ಶಿಯಾಗಿ ಮೋನಪ್ಪ ಕೋಡಿ ಕಕ್ಕೂರು ಆಯ್ಕೆಯಾದರು.ಸದಸ್ಯರಾಗಿ ಮೂಸೆ ಕುಂಞ ಅಪಿನಿಮೂಲೆ, ಕೃಷ್ಣಪ್ಪ ಉಡ್ಡಂಗಳ, ವೇಣುಗೋಪಾಲ ಕೆದುವಾರು, ವಸಂತಿ ತೂಂಬಡ್ಕ, ಗೀತಾ ಗುವೆಲ್ ಗದ್ದೆ, ಭವಾನಿ ಸೂರಂಬೈಲು, ಶುಭಾಷಿಣಿ ಅಂಬಟೆಮೂಲೆ, ಮಾಲಿಂಗ ಅರ್ಧಮೂಲೆ, ಶಿವರಾಮ ಮಣಿಯಾಣಿ ದೇವಸ್ಯ, ಪುಷ್ಪ ಒಡ್ಯ, ನಳಿನಾಕ್ಷಿ ಕುಂಞಮೂಲೆ, ಜಯಶ್ರೀ ಸೂರಂಬೈಲು, ಶಶಿಕಲ ದೇವಸ್ಯ, ವಸಂತ ಪಿದಾರ ಆಯ್ಕೆಯಾದರು.ಅಕ್ಷರ ದಾಸೋಹ ತಾಯಂದಿರ ಸಮಿತಿ: ಹೇಮಾವತಿ ಭರಣ್ಯ, ವಸಂತಿ ತೂಂಬಡ್ಕ, ಪ್ರಮೀಳ ತೂಂಬಡ್ಕ, ಲಲಿತ ಕೊಂದಲ್ಕಾನ, ಸವಿತ ಮಿತ್ತಡ್ಕ, ಚಂದ್ರಾವತಿ ಪಾರ್ಪಳ, ಹರಿಣಾಕ್ಷಿ ಆರ್ಲಪದವು, ಶೋಭಾ ಸುಡುಕುಳಿ, ಸುನೀತ ಸೂರಂಬೈಲು, ಚಂಚಲಾಕ್ಷಿ ವಾಣಿನಗರ, ಸಾರ ತಲಪಾಡಿ, ಲಲಿತ ಸೂರಂಬೈಲು, ತೇಜಸ್ವಿನಿ ಗುವೆಲ್ ಗದ್ದೆ, ಆಶಾಲತಾ ಕೀಲಂಪಾಡಿ.ಮಕ್ಕಳ ಸುರಕ್ಷತಾ ಸಮಿತಿ: ರಫೀಕ್ ಕಕ್ಕೂರು, ರಜಾಕ್ ಪಾರ್ಪಳ, ಪುರಂದರ ಒಡ್ಯ, ಮಹಾಲಿಂಗ ಅರ್ಧಮೂಲೆ, ಶ್ರೀನಿವಾಸ ಭರಣ್ಯ, ಪಾರ್ವತಿ ಭರಣ್ಯ, ರಜಿಯಾ ತಲಪಾಡಿ, ವೀಣಾ ಕಲ್ಲಪದವು.ವಿದ್ಯಾರ್ಥಿನಿಯರಾದ ವೈಶವಿ ಕೆ.ಪಿ ಹಾಗೂ ದೀಪಿಕಾ ಪಿ.ಎಸ್ ಪ್ರಾರ್ಥಿಸಿದರು. ಮುಖ್ಯ ಶಿಕ್ಷಕಿ ನಿರ್ಮಲ ಕೆ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ಎಸ್.ಪಿ ಶಾಲೆಯಲ್ಲಿ ಮಕ್ಕಳು ಅನುಸರಿಸಬೇಕಾದ ನಿಯಮಗಳನ್ನು ಪೋಷಕರಿಗೆ ತಿಳಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹಶಿಕ್ಷಕರು ಸಹಕರಿಸಿದರು.

LEAVE A REPLY

Please enter your comment!
Please enter your name here