ಅಜ್ಜಿಕಲ್ಲು ಮುಂಡೋದ ಮೂಲೆ ಅಂಗನವಾಡಿಗೆ ಪೋಷಕರಿಂದ ಇನ್‌ವರ್ಟರ್ ಕೊಡುಗೆ

0

ನಿಡ್ಪಳ್ಳಿ: ಅಜ್ಜಿಕಲ್ಲು ಮುಂಡೋದ ಮೂಲೆ ಅಂಗನವಾಡಿ ಕೇಂದ್ರಕ್ಕೆ ಈ ಶೈಕ್ಷಣಿಕ ವರ್ಷದಲ್ಲಿ ಬೀಳ್ಕೊಡುಗೆ ಪಡೆದ ಮಕ್ಕಳ ಪೋಷಕರು ಇನ್‌ವರ್ಟರ್ ಕೊಡುಗೆಯಾಗಿ ನೀಡಿದ್ದಾರೆ.

ಸಾನ್ವಿಕ, ಕವನಶ್ರೀ, ಆಧ್ಯ, ಹಾದ್ವಿಕ, ವಿಹಾನಿ, ಮನ್ವಿತ್ ಎಂ.ಎಸ್, ಆಥರ್ವ ರೈ, ವಿಜಿತ್, ಯಶಸ್ವಿನಿ, ಲಿಶಾನ್ ಡಿ.ರೈ, ವಿಹಾನ್ ಕುಲಾಲ್, ಮನ್ವಿತ್ ಹೆಚ್.ಎನ್ ಈ ಮಕ್ಕಳ ಪೋಷಕರು ಕೇಂದ್ರಕ್ಕೆ ಅತ್ಯವಶ್ಯಕವಾಗಿದ್ದ ಇನ್‌ವರ್ಟರ್ ಅನ್ನು ನೀಡಿದರು. ಕೊಡುಗೆ ನೀಡಿದ ಎಲ್ಲಾ ಮಕ್ಕಳ ಪೋಷಕರಿಗೆ ಹಾಗೂ ಮಕ್ಕಳಿಗೆ ಅಂಗನವಾಡಿ ಕೇಂದ್ರ ಮತ್ತು ಬಾಲವಿಕಾಸ ಸಮಿತಿಯ ಪರವಾಗಿ ಧನ್ಯವಾದ ಸಲ್ಲಿಸಲಾಯಿತು.

ಅಂಗನವಾಡಿ ಕಾರ್ಯಕರ್ತೆ ಗೀತಾ ಡಿ. ಹಾಗೂ ಸಹಾಯಕಿ ರತಿ ಮತ್ತಿತರರು ಕೊಡುಗೆಯನ್ನು ಸ್ವೀಕರಿಸಿದರು.

LEAVE A REPLY

Please enter your comment!
Please enter your name here