ಕಬಕ: ಸರಕಾರಿ ಶಾಲೆಗೆ ಡಾ. ಸದಾಶಿವ ಭಟ್‌ರಿಂದ ಆಟದ ಸಾಮಗ್ರಿ ಕೊಡುಗೆ

0

ಕಬಕ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಕಬಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಡಾ. ಸದಾಶಿವ ಭಟ್ ಈಶ ಡೆಂಟಲ್ ಕೇರ್ ಕಬಕ ಇದರ ವತಿಯಿಂದ ಉಚಿತವಾಗಿ ವಿವಿಧ ಆಟದ ಸಾಮಗ್ರಿಗಳನ್ನು ದಾನವಾಗಿ ನೀಡಲಾಯಿತು.

ದಾನಿಗಳಾದ ಡಾ. ಸದಾಶಿವ ಭಟ್ ಅವರು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರಿಗೆ ಆಟದ ಪರಿಕರಗಳನ್ನು ಹಸ್ತಾಂತರಿಸಿದರು. ಕ್ರಿಕೆಟ್ ಬ್ಯಾಟ್, ಟೆನ್ನಿಸ್ ಬಾಲ್‌ಗಳು, ಬ್ಯಾಡ್ಮಿಂಟನ್ ರಾಕೆಟ್‌ಗಳು, ಕ್ಯಾರಂ ಬೋರ್ಡ್ ಹಾಗೂ ಚೆಸ್ ಬೋರ್ಡ್ ಸೇರಿದಂತೆ ಒಳಾಂಗಣ ಮತ್ತು ಹೊರಾಂಗಣ ಆಟದ ಸಾಮಗ್ರಿಗಳನ್ನು ನೀಡಲಾಯಿತು.ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಹಶಿಕ್ಷಕರು ಡಾ. ಸದಾಶಿವ ಭಟ್ ಅವರ ಉದಾತ್ತ ಕಾರ್ಯವನ್ನು ಶ್ಲಾಘಿಸಿದರು. “ಮಕ್ಕಳಲ್ಲಿ ಕ್ರೀಡಾಮನೋಭಾವನೆಯನ್ನು ಬೆಳೆಸಲು ಮತ್ತು ಅವರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಲು ಈ ಆಟದ ಸಾಮಗ್ರಿಗಳು ಅತ್ಯಂತ ಸಹಕಾರಿಯಾಗಿದೆ” ಎಂದು ಸಹಶಿಕ್ಷಕಿ ಗೋದಾವರಿ ಟಿ. ಭಟ್ ಕೃತಜ್ಞತೆ ಸಲ್ಲಿಸಿದರು. ಆಟದ ಪರಿಕರಗಳನ್ನು ಪಡೆದ ಶಾಲಾ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಕಂಡುಬಂತು.

LEAVE A REPLY

Please enter your comment!
Please enter your name here