







ಪುತ್ತೂರು: ಕಾಲು ಬಾಯಿ ಹಾಗೂ ಚರ್ಮಗಂಟು ರೋಗ ನಿರ್ಮೂಲನಾ ಅಂಗವಾಗಿ 2026ನೇ ಸಾಲಿನ ಲಸಿಕಾ ಅಭಿಯಾನದ ಅಡಿಯಲ್ಲಿ ಪಶು ಸಂಗೋಪನಾ ಇಲಾಖೆ ಹಾಗೂ ಮುಕ್ಕೂರು ಹಾಲು ಉತ್ಪಾದಕರ ಸಂಘದ ಜಂಟಿ ಆಶ್ರಯದಲ್ಲಿ ಲಸಿಕಾ ಕಾರ್ಯಕ್ರಮವನ್ನುಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಅವರು ಲಸಿಕೆಯನ್ನು ವೈದ್ಯಾಧಿಕಾರಿ ಡಾಕ್ಟರ್ ಸೂರ್ಯನಾರಾಯಣ ಭಟ್ ಅವರಿಗೆ ನೀಡುವುದರ ಮೂಲಕ ಉದ್ಘಾಟಿಸಿದರು.


ಮುಕ್ಕೂರು ಸಂಘದ ವ್ಯಾಪ್ತಿಯ ಸುಮಾರು 93 ದನಗಳಿಗೆ ಲಸಿಕೆ ಹಾಕಲಾಯಿತು. ಪಶುಸಖಿಯರಾದ ರಾಜೇಶ್ವರಿ, ಮೀನಾಕ್ಷಿ,ಪ್ರತಿಮಾ, ಗೀತಾ, ಪದ್ಮಾವತಿ, ಯಶೋಧ ಇವರುಗಳು ಅಭಿಯಾನವನ್ನು ಯಶಸ್ವಿಯಾಗಿ ನಿರ್ವಹಿಸಿದರು.



ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ನಿರ್ದೇಶಕರಾದ ಸುಮಲತಾ ಲೋಕನಾಥ್ ಮರಿಕ್ಕೇಯಿ, ಹೊನ್ನಪ್ಪ ಚಾವುಂಡಿ ಮೂಲೆ, ಹಾಲು ಪರೀಕ್ಷಕಿ ಲಲಿತ ಉಪಸ್ಥಿತರಿದ್ದರು. ಕಾರ್ಯದರ್ಶಿ ಮಾಲತಿ ಸ್ವಾಗತಿಸಿದರು. ವಾಹನದ ವ್ಯವಸ್ಥೆಯನ್ನು ಶ್ರೀಧರ ಹಾಗೂ ತಾರೇಶ್ ಒದಗಿಸಿ ಕೊಡುವ ಮೂಲಕ ಸಹಕರಿಸಿದರು.










