ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ

0

ಉಪ್ಪಿನಂಗಡಿ: ದ್ವಾರಕಾ ಕಾರ್ಪ್. ಪ್ರೈ. ಲಿ. ಇದರ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಉಪ್ಪಿನಂಗಡಿ ಸಮೀಪದ ಕೆಮ್ಮಾರದ ಉಜ್ಜೀವನ ಬಡಾವಣೆಯಲ್ಲಿ ಸಾಮೂಹಿಕ ಭೂಮಿ ಪೂಜೆ ಜೂ.18 ರಂದು ವಿಧಿವತ್ತಾಗಿ ನಡೆಯಿತು.

ಪುರೋಹಿತರಾದ ವೇ.ಮೂ. ಕೃಷ್ಣಕುಮಾರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸಾಮೂಹಿಕ ಭೂಮಿ ಪೂಜೆ ಸಂಪನ್ನಗೊಂಡಿತು. ಈ ಸಂದರ್ಭದಲ್ಲಿ ಸುಮಾರು 51 ಮನೆಗಳ ಭೂಮಿ ಪೂಜೆ ನಡೆದಿದ್ದು, ಹಲವು ಗ್ರಾಹಕರು ತಮ್ಮ ಸೈಟ್‌ನ ಭೂಮಿ ಪೂಜೆಯನ್ನು ನೆರವೇರಿಸಿದರು.ಇ ದೇ ಸಂದರ್ಭದಲ್ಲಿ ಬಡಾವಣೆಯ ‘ದ್ವಾರಕಾ ನೆಸ್ಟ್’ ನ ಲೋಕಾರ್ಪಣೆ ಪ್ರಯುಕ್ತ ಧಾರ್ಮಿಕ ಕಾರ್ಯಗಳು ನಡೆದವು. ಜೂ.17ರ ರಾತ್ರಿ ವಾಸ್ತು ಪೂಜೆ, ವಾಸ್ತು ಹೋಮ; ಹಾಗೆಯೇ ಜೂ.18ರಂದು ಮಹಾಗಣಪತಿ ಹವನ, ಲಕ್ಷ್ಮೀ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ಗೋಪಾಲಕೃಷ್ಣ ಭಟ್ಟ ಅರ್ತ್ಯಡ್ಕ, ಕಾರ್ಯನಿರ್ವಾಹಕ ನಿರ್ದೇಶಕ ಅಮೃತಕೃಷ್ಣ ಎನ್., ಡೈರೆಕ್ಟರ್ ಅಶ್ವಿನಿ ಎನ್. ಸೇರಿದಂತೆ ಸಿಬ್ಬಂದಿ ವರ್ಗ, ಬಂಧು ಮಿತ್ರರು, ಗ್ರಾಹಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here