ಪುತ್ತೂರಿನಿಂದ ಮಂತ್ರಾಲಯಕ್ಕೆ ನೂತನ ಬಸ್ ಶ್ರೀಕುಮಾರ ಟ್ರಾವೆಲ್ಸ್ : ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತುಪ್ಪದ ದೀಪ ಬೆಳಗಿಸಿ ಚಾಲನೆ

0

ಪುತ್ತೂರು: ಪ್ರತಿ ದಿನ ಪುತ್ತೂರಿನಿಂದ ಮಂತ್ರಾಲಯಕ್ಕೆ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ನಾನ್ ಎಸಿ ಸ್ಲೀಪರ್ ಶ್ರೀಕುಮಾರ ಟ್ರಾವೆಲ್ಸ್‌ಗೆ ಜೂ.19ರಂದು ಚಾಲನೆ ನೀಡಲಾಗಿದೆ.


ಶ್ರೀಕುಮಾರ ಟ್ರಾವೆಲ್ಸ್‌ನ ಮಾಲಕ ಹೊನ್ನಾವರದ ವೆಂಕಟ್ರಮಣ ಹೆಗ್ಡೆಯವರು ಶ್ರೀ ದೇವಳದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರ ಮಾರ್ಗದರ್ಶನದಲ್ಲಿ ಶುದ್ದ ಎಳ್ಳೆಣ್ಣೆ ಸಮರ್ಪಣೆ ಮಾಡಿ, ತುಪ್ಪದ ದೀಪ ಬೆಳಗಿಸಿ ದೇವಳಕ್ಕೆ ಅನ್ನದಾನಕ್ಕೆ ದೇಣಿಗೆ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಸಂತ ಕೆದಿಲಾಯ ಪ್ರಸಾದ ನೀಡಿದರು. ಬಳಿಕ ದೇವಳದ ರಥಬೀದಿಯಲ್ಲಿ ನೂತನ ಎರಡು ಬಸ್‌ಗಳಿಗೆ ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ವಾಹನ ಪೂಜೆ ಮಾಡಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಲೋಕೇಶ್ ಪಡ್ಡಾಯೂರು, ಗಣೇಶ್ ಆಚಾರ್ಯ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.


ಪ್ರತಿ ದಿನ ಪುತ್ತೂರಿನಿಂದ ಹೊರಡಲಿದೆ
ಶ್ರೀಕುಮಾರ ಬಸ್ ಪ್ರತಿ ದಿನ ಪುತ್ತೂರಿನಿಂದ ಹೊರಟು ಮಂತ್ರಾಲಯಕ್ಕೆ ತಲುಪಲಿದೆ. ಪುತ್ತೂರಿನಿಂದ ಮಧ್ಯಾಹ್ನ ಗಂಟೆ 3ಕ್ಕೆ ಹೊರಟು ಮಂಗಳೂರು, ಉಡುಪಿ, ಹುಬ್ಬಳ್ಳಿ, ರಾಯಚೂರು ಮಾರ್ಗವಾಗಿ ಮಂತ್ರಾಲಯಕ್ಕೆ ಬೆಳಿಗ್ಗೆ ಗಂಟೆ 8.30ಕ್ಕೆ ತಲುಪಲಿದೆ. ಪ್ರಯಾಣಕ್ಕೆ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವಿದೆ ಎಂದು ಶ್ರೀಕುಮಾರ ಟ್ರಾವೆಲ್ಸ್‌ನ ಮಾಲಕ ವೆಂಕಟ್ರಮಣ ಹೆಗ್ಡೆಯವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here