







ಬಡಗನ್ನೂರು: ಕುಂಜೂರುಪಂಜ ಸ.ಹಿ.ಪ್ರಾ.ಶಾಲಾ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಪುತ್ತೂರು ಪ್ರಗತಿ ಎಜುಕೇಶನ್ ಟ್ರಸ್ಟ್ ಇದರ ವತಿಯಿಂದ ರಕ್ತವರ್ಗೀಕರಣ ಶಿಬಿರವು ಜೂ.16ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.



ಪುತ್ತೂರು ಪ್ರಗತಿ ಎಜುಕೇಶನ್ ಟ್ರಸ್ಟ್ ನ ಪ್ರಾಂಶುಪಾಲ ಪ್ರೇಮಲತಾ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮತ್ತು ರಕ್ತವರ್ಗೀಕರಣ ಮಹತ್ವದ ಬಗ್ಗೆ ಸವಿಸ್ತಾರವಾಗಿ ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೖೆಸಿದರು. ಕಾರ್ಯಕ್ರಮವು ಎಸ್ ಡಿಎಂಸಿ ಅಧ್ಯಕ್ಷ ಶರೀಫ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವೇದಿಕೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶಾಲಿನಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಶುಭಲಕ್ಷ್ಮಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪೂವಪ್ಪ ನಾಯ್ಕ, ಕೊಡುಗೖೆ ದಾನಿ ಬಾಲಕೃಷ್ಣ ಪೂಜಾರಿ ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು.



ಮುಖ್ಯಗುರು ಮಹಮ್ಮದ್ ಅಶ್ರಫ್ ರವರು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಶಶಿಕಲಾ ಬಿ ವಂದಿಸಿದರು. ಸಹಶಿಕ್ಷಕಿ ಸುಮಲತ ಪಿ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.
ಅತಿಥಿ ಶಿಕ್ಷಕಿ ನಮಿತಾ, ಗೌರವ ಶಿಕ್ಷಕಿ ಪ್ರೀತಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಸದಸ್ಯರು ಮಕ್ಕಳ ಪೋಷಕರು, ಶಿಕ್ಷಣಾಭಿಮಾನಿಗಳು ಅಕ್ಷರದಾಸೋಹ ಸಿಬ್ಬಂದಿಗಳು ಮತು ಊರಿನವರು ಉಪಸ್ಥಿತರಿದ್ದರು. ಯುಟ್ಯೂಬರ್ ಟೀಮ್ ಸಮೋಸದ ಮುನೀರ್ ಹಾಗೂ ಅವರ ತಂಡದ ವತಿಯಿಂದ ಮಕ್ಕಳಿಗೆ ಸಿಹಿಯನ್ನು ಹಂಚಿದರು. ಬಳಿಕ ಪ್ರಗತಿ ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕರಿಂದ ರಕ್ತ ವರ್ಗಿಕರಣ ಕಾರ್ಯ ನಡೆಯಿತು. ಶಾಲಾ ಮಕ್ಕಳ ಹಾಗೂ ಪೋಷಕರು ಇದರ ಸದುಪಯೋಗವನ್ನು ಪಡೆದುಕೊಂಡರು.
ಸನ್ಮಾನ
ಈ ಸಂದರ್ಭದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯದಲ್ಲಿ ಕೈ ಜೋಡಿಸುತ್ತ ಸುಮಾರು 7 ವರ್ಷದಿಂದ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿ ಪೂವಪ್ಪ ನಾಯ್ಕ ರವರನ್ನು ಶಾಲು, ಹಾರ ಹಾಕಿ ಸನ್ಮಾನಿಸಿ ಬೀಳ್ಕೊಡುಗೆ ಮಾಡಲಾಯಿತು.









