







ಪುತ್ತೂರು: ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಕೌಶಲ್ಯಗಳ ಅಭಿವೃದ್ಧಿಯ ಜತೆಗೆ ವ್ಯಕ್ತಿತ್ವ ವಿಕಸನ ತರಬೇತಿ ’ ರಜತ ಪಲ್ಲವ ’ ಸರಣಿ ಕಾರ್ಯಾಗಾರದ ಎರಡನೇ ತರಬೇತಿ ಕಾರ್ಯಕ್ರಮ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಯಿತು.



ಸಂಪಮ್ಮೂಲ ವ್ಯಕ್ತಿ ವರುಣ್ ಪ್ರಭು (CEO of ExuBrand D) ಇವರಿಂದ ನಡೆಸಲ್ಪಟ್ಟ ಈ ಕಾರ್ಯಗಾರದಲ್ಲಿ ಪ್ರಮುಖವಾಗಿ ಪ್ರತಿಭೆ ಮತ್ತು ಕೌಶಲ್ಯಗಳ ಅನಾವರಣಕ್ಕೆ ವಿದ್ಯಾರ್ಥಿಗಳು ಸಿದ್ದರಾಗುವ ಬಗ್ಗೆ ಹಾಗೂ ಕನಸುಗಳನ್ನು ನನಸಾಗಿಸುವ ಪ್ರಕ್ರಿಯೆಗಳ ಬಗ್ಗೆ ಚಟುವಟಿಕೆಗಳೊಂದಿಗೆ ತರಬೇತಿ ನೀಡಲಾಯಿತು.



ಈ ಕಾರ್ಯಾಗಾರದಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ಕೋಶಾಧಿಕಾರಿ ಹರೀಶ್ ಪುತ್ತೂರಾಯ, ಮತ್ತು ಮುಖ್ಯ ಶಿಕ್ಷಕ ಪ್ರಸನ್ನ ಕೆ ಇವರು ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದ ಸಂಯೋಜಕ ಸಹ ಶಿಕ್ಷಕ ಆನಂದ್ ಆರ್.ರವರು ಸ್ವಾಗತಿಸಿದರು. ಸಹ ಶಿಕ್ಷಕಿ ಪ್ರಮೀಳಾ ಇವರು ವಂದಿಸಿದರು.










