ನರಿಮೊಗರು 50 ವರ್ಷಗಳ ಹಿಂದಿನ ರಸ್ತೆವಿವಾದಕ್ಕೆ ಮುಕ್ತಿ – ಶಾಸಕರನ್ನು ಸನ್ಮಾನಿಸಿದ ಕಾಯರ್‌ಮುಗೇರು ಕುಟುಂಬಸ್ಥರು

0

ಪುತ್ತೂರು; ಸುಮಾರು 50 ವರ್ಷಗಳಿಂದ ಇದ್ದ ರಸ್ತೆ ವಿವಾದವೊಂದನ್ನು ಮಾತುಕತೆ ಮೂಲಕ ಇತ್ಯರ್ಥಪಡಿಸಿ ಎರಡೂ ಕುಟುಮಬವನ್ನು ಒಂದುಗೂಡಿಸಿದ್ದಕ್ಕಾಗಿ ಶಾಸಕ ಅಶೋಕ್ ರೈ ಅವರನ್ನು ಸನ್ಮಾನಿಸಲಾಗಿದೆ.


ನರಿಮೊಗರು ಗ್ರಾಮದ ಕಾಯರ್‌ಮುಗೇರು ಎಂಬಲ್ಲಿ ಸಂಬಂದಿಕರಾದ ದೇರಣ್ಣ ಗೌಡ ಮತ್ತು ಲೋಕಯ್ಯ ಗೌಡ ಕುಟುಂಬದ ನಡುವೆ ಇದ್ದ ರಸ್ತೆ ವಿವಾದದ ಬಗ್ಗೆ ಶಾಸಕರಿಗೆ ದೂರು ಬಂದಿತ್ತು. ವಿವಾದಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರನ್ನು ಕರೆಸಿ ಶಾಸಕರು ಮಾತುಕತೆ ನಡೆಸಿದ್ದರು. ಮಾತುಕತೆ ನಡೆಸಿದ ಪರಿಣಾಮ ಎರಡೂ ಕುಟುಂಬಸ್ಥರು ರಸ್ತೆ ವಿವಾದವನ್ನು ರಾಜಿಮೂಲಕ ಇತ್ಯರ್ಥಪಡಿಸಲು ಒಪ್ಪಿಕೊಂಡಿದ್ದರು. ಶಾಸಕ ಅಶೋಕ್ ರೈ ಮೂಲಕ ಎರಡೂ ಕುಟುಂಬಸ್ಥರು ಒಂದಾಗಿ ತಮ್ಮೊಳಗಿದ್ದ ವಿವಾದವನ್ನು ಬಗೆಹರಿಸಿಕೊಂಡಿದ್ದಾರೆ. ಕುಟುಂಬವನ್ನು ಒಂದಗೂಡಿಸಿದ ಶಾಸಕ ಅಶೋಕ್ ರೈ ಅವರನ್ನು ಎರಡೂ ಕುಟುಂಬಸ್ಥರ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.


ನರಿಮೊಗರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡ ಬಾಬು ಶೆಟ್ಟಿ ನರಿಮೊಗರು ಹಾಗೂ ವಲಯ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ಕೈಂದಾಡಿಯವರು ಮುತುವರ್ಜಿಯಲ್ಲಿ ರಾಜಿಮಾತುಕತೆ ನಡೆದಿತ್ತು.
ಈ ಸಂದರ್ಭದಲ್ಲಿ ದೇರಣ್ಣ ಗೌಡ, ಲಿಂಗಪ್ಪ ಗೌಡ ಯೋಗಿಶ್ ಗೌಡ, ವಿಶ್ವನಾಥ ಗೌಡ, ಶೇಖರ ಗೌಡ, ಸೀತಾರಾಮ ಗೌಡ, ಬಾಲಕೃಷ್ಣ ಗೌಡ, ಪುನೀತ್ ಗೌಡ, ರೋಹಿತ್ ಗೌಡ, ಗಣೇಶ್ ಗೌಡ, ಶೇಖರ ಗೌಡ, ಸೌಮ್ಯ, ಲೋಕಯ್ಯ ಗೌಡ ಹಾಗೂ ಪಕ್ಷದ ಮುಖಂಡರಾದ ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷೆ ಹರಿಣಾಕ್ಷಿ, ಬೂತ್ ಅಧ್ಯಕ್ಷ ವಸಂತ್, ರಾಘವೇಂದ್ರ ಉಪಸ್ಥಿತರಿದ್ದರು.

ಸುಮಾರು 50 ವರ್ಷಗಳಿಂದ ನಮ್ಮೊಳಗಿದ್ದ ದಾರಿ ವಿವಾದವನ್ನು ಶಾಸಕ ಅಶೋಕ್ ರೈ ಅವರು ಮುತುವರ್ಜಿವಹಿಸಿ ಇತ್ಯರ್ಥ ಮಾಡಿದ್ದು ಮಾತ್ರವಲ್ಲದೆ ಪರಸ್ಪರ ಮುನಿಸಿಕೊಂಡಿದ್ದ ಎರಡು ಕುಟುಂಬವನ್ನು ಒಂದುಗೂಡಿಸಿದ್ದಾರೆ. ನಾವು ಬಿಜೆಪಿ ಕಾರ್ಯಕರ್ತರು, ಬಿಜೆಪಿಗಾಗಿ ಕೆಲಸ ಮಾಡಿದವರು ಆದರೆ ನಮ್ಮ ದಾರಿ ಸಮಸ್ಯೆಯನ್ನು ಇತ್ಯರ್ಥ ಮಾಡುವಲ್ಲಿ ಯಾರೂ ಸಹಾಯ ಮಾಡಿಲ್ಲ. ಓರ್ವ ಕುಟುಮಬ ಸದಸ್ಯನಂತೆ ಮುಂದೆ ನಿಂತು ನಮ್ಮನ್ನು ಒಂದುಗೂಡಿಸಿದ್ದಾರೆ. ಮುಂದೆ ನಾವು ಅಶೋಕ್ ರೈ ಜೊತೆ ಇರುತ್ತೇವೆ, ಅವರಿಗೇ ನಮ್ಮ ಕುಟುಂಬದ ಪೂರ್ಣ ಬೆಂಬಲ ಇದೆ, ಮುಂದಿನ ಚುನಾವಣೆಯಲ್ಲಿ ನಾವು ಅವರನ್ನು ಬೆಂಬಲಿಸುತ್ತೇವೆ.
ವಿಶ್ವನಾಥ ಗೌಡ
ಕಾಯರ್‌ಮುಗೇರು

LEAVE A REPLY

Please enter your comment!
Please enter your name here