ಬಾಲಕನನ್ನು ಬಸ್ಸಿನಿಂದ ನಿಗದಿತ ಸ್ಥಳದಲ್ಲಿ ಇಳಿಸದ ಘಟನೆ- ಬಸ್ ಕಂಡಕ್ಟರ್ ಅಮಾನತಿಗೆ ಶಾಸಕ ಅಶೋಕ್ ರೈ ಸೂಚನೆ

0

ಪುತ್ತೂರು: ಬಸ್ಸಿನಲ್ಲಿ ಬಂದಿದ್ದ ವಿದ್ಯಾರ್ಥಿ ಬಾಲಕನೋರ್ವನನ್ನು ಬಾಲಕ ತಿಳಿಸಿದ ಸ್ಥಳದಲ್ಲಿ ನಿಲ್ಲಿಸದೆ ತೊಂದರೆ ನೀಡಿದ್ದ ಬಸ್ ಕಂಡಕ್ಟರ್ ವಿರುದ್ದ ಕ್ರಮಕೈಗೊಳ್ಳುವುದು ಮತ್ತು ಕಂಡಕ್ಟರ್‌ನನ್ನು ಅಮಾನತು ಮಾಡುವಂತೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ.


ವಿಟ್ಲ ಕಂಬಳಬೆಟ್ಟು ಮಾಮೇಶ್ವರ ನಿವಾಸಿ ಬಾಲಕನೋರ್ವ ವಿಟ್ಲದ ಶಾಲೆಯೊಂದಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ವಿಟ್ಲದಿಂದ ಕಾಸರಗೋಡು ಧರ್ಮಸ್ಥಳ ಬಸ್ಸಿಗೆ ಹತ್ತಿದ್ದ. ಕಂಬಳಬೆಟ್ಟು ತಲುಪುತ್ತಿದ್ದಂತೆಯೇ ಬಸ್ ನಿಲ್ಲಿಸುವಂತೆ ಕಂಡಕ್ಟರ್‌ಗೆ ಹೇಳಿದ್ದಾನೆ. ಆದರೆ ಕಂಡಕ್ಟರ್ ಮಾತ್ರ ಬಸ್ ನಿಲ್ಲಿಸುವಂತೆ ಸೂಚಿಸಿಲ್ಲ. ಬಳಿಕ ಕಬಕ್ ಜಂಕ್ಷನ್‌ನಲ್ಲಿ ಬಾಲಕನನ್ನು ಬಸ್ಸಿನಿಂದ ಇಳಿಸಿದ್ದ. ಬಳಿಕ ಬಾಲಕ ಮನೆ ಮಂದಿಗೆ ಕರೆ ಮಾಡಿ ತಿಳಿಸಿದ್ದು ಆ ಬಳಿಕ ಮನೆ ಸೇರಿದ್ದಾನೆ.


ಆರನೇ ತರಗತಿ ವಿದ್ಯಾರ್ಥಿ ಪುತ್ತೂರಿಗೆ ತೆರಳುವ ಬಸ್ ಎಂದು ಭಾವಿಸಿ ಕಾಸರಗೋಡು ಧರ್ಮಸ್ಥಳ ಎಕ್ಸ್‌ಪ್ರೆಸ್‌ಗೆ ಹತ್ತಿದ್ದ , ಬಸ್ ಹತ್ತಿದ ಮೇಲೆ ಇದು ಎಕ್ಸ್‌ಪ್ರೆಸ್ ಎಂದು ಗೊತ್ತಾಗಿತ್ತು. ಬಾಲನಾಗಿರುವ ಕಾರಣ ಕಂಡಕ್ಟರ್‌ಗೆ ಮಾನವೀಯ ನೆಲೆಯಲ್ಲಿ ಬಸ್ ನಿಲ್ಲಿಸಿ ಆತನನ್ನು ಕಂಬಳಬೆಟ್ಟಿನಲ್ಲಿ ಇಳಿಸಬಹುದಿತ್ತು ಆದರೆ ಕಂಡಕ್ಟರ್ ರೂಲ್ಸ್ ಪಾಲಿಸುವ ನೆಪದಲ್ಲಿ ಕಬಕದಲ್ಲೇ ನಿಲ್ಲಿಸಿದ್ದ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಖಂಡನೆಗೆ ಕಾರಣವಾಗಿತ್ತು.

ಕಂಡಕ್ಟರ್ ಅಮಾನತು ಮಾಡಿ:
ಪುಟ್ಟ ಬಾಲಕನನ್ನು ನಿಗದಿತ ಸ್ಥಳದಲ್ಲಿ ಇಳಿಸದೆ ಕಿ.ಮೀ ದೂರದಲ್ಲಿ ಇಳಿಸಿ ಅಮಾನವೀಯತೆ ಮೆರೆದ ಬಸ್ ಕಂಡಕ್ಟರ್‌ನನ್ನು ಅಮಾನತು ಮಾಡುವಂತೆ ಪುತ್ತೂರು ಕೆಎಸ್‌ಆರ್‌ಟಿಸಿ ಡಿಪೋ ಮೆನೆಜರ್‌ಗೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದಾರೆ. ಯಾರದ್ದೋ ಮಗು ಎಂದು ಆತ ಎಲ್ಲೋ ಬಿಟ್ಟಿದ್ದಾನೆ, ಅವನ ಮಗನಾದರೆ ಆರೀತಿ ಮಾಡ್ತಿದ್ರ ಎಂದು ಪ್ರಶ್ನಿಸಿದ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು ಎಂದು ಶಾಸಕರು ಸೂಚನೆಯನ್ನು ನೀಡಿದ್ದಾರೆ.

LEAVE A REPLY

Please enter your comment!
Please enter your name here