






ಆರ್ಲಪದವು-ಪಾಣಾಜೆ: ಶ್ರೀ ಕಾರ್ತಿಕೇಯ ಮಹಿಳಾ ಭಜನಾ ಮಂಡಳಿಯ ವತಿಯಿಂದ ಗುರುವಂದನೆ ಹಾಗೂ ಭಜನಾ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿರುವ ಮಹನೀಯರ ಸನ್ಮಾನ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು.



ಕಾರ್ಯಕ್ರಮದಲ್ಲಿ ಭಜನಾ ಗುರುಗಳಾದ ಮದ್ವಾದೀಶ ವಿಠಲ ದಾಸ ನಾಮಾಂಕಿತ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಅವರ ಧರ್ಮಪತ್ನಿ ಉಮಾರಾವ್ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು. ಗುರುಗಳ ಮಾರ್ಗದರ್ಶನ ಮತ್ತು ಸೇವೆಯನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸಲಾಯಿತು.ಭಜನಾ ಸಂಘದ ಚಟುವಟಿಕೆಗಳಿಗೆ ನಿರಂತರ ಸಹಕಾರ ನೀಡುತ್ತಿರುವ ದುರ್ಗಾಸಭಾ ಭವನದ ಮಾಲೀಕರಾದ ಸುಬ್ರಮಣ್ಯ ಭಟ್ ಹಾಗೂ ಶಂಕರಿ ಸುಬ್ರಮಣ್ಯ ಭಟ್ ಅವರನ್ನು ಗೌರವಿಸಲಾಯಿತು.ಅಲ್ಲದೆ, ಭಜನಾ ಸಂಘದ ಬೆಳವಣಿಗೆಗೆ ಬೆನ್ನೆಲುಬಾಗಿ ನಿಂತು ಸದಾ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ನೀಡುತ್ತಿರುವ ಸದಾಶಿವ ರೈ ಸೂರಂಬೈಲು ಹಾಗೂ ಹರಿ ನಡುಕಟ್ಟ ಅವರನ್ನು ಸನ್ಮಾನಿಸಲಾಯಿತು.



ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷೆ ಶಾರದಾ ಗೋಪಾಲ್ ಕೊಂದಲ್ಕಾನ ಹಾಗೂ ಕಾರ್ಯದರ್ಶಿ ಸುಜಾತಾ ಬಟ್ಯ ಮಾಸ್ಟರ್, ಆರ್ಲಪದವು ಇವರನ್ನು ಮಂಡಳಿಯ ಸದಸ್ಯರು ಗೌರವಿಸಿ ಅಭಿನಂದಿಸಿದರು.ಕಾರ್ಯಕ್ರಮವನ್ನು ಸುಪ್ರೀತ ಅವರು ಅಚ್ಚುಕಟ್ಟಾಗಿ ನಿರೂಪಿಸಿದರು. ಸುಜಾತಾ ಅವರು ಧನ್ಯವಾದ ಸಮರ್ಪಿಸಿದರು.









