







ಕಾಣಿಯೂರು: ದೋಳ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2026-27 ನೇ ಸಾಲಿನ ನೂತನ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ ರಚನಾ ಸಭೆಯು ಕಾಣಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘು ಬಿ. ಎನ್,. ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಹರೀಶ್ ಕೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಮತ್ತು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಪರವ ಇವರ ಉಪಸ್ಥಿತಿಯಲ್ಲಿ ಜೂ.23ರಂದು ನಡೆಯಿತು.



ಸಭೆಯಲ್ಲಿ ಶಾಲೆಯ ಅಭಿವೃದ್ಧಿ,ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಮೂಲಭೂತ ಸೌಕರ್ಯಗಳ ಸುಧಾರಣೆ ಹಾಗೂ ಸಮುದಾಯದ ಸಹಭಾಗಿತ್ವದ ಕುರಿತು ಚರ್ಚೆ ನಡೆಸಲಾಯಿತು. ಬಳಿಕ ಎಸ್.ಡಿ.ಎಂ. ಸಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ದಯಾನಂದ ಗೌಡ ಕೂರೇಲು ಹಾಗೂ ಉಪಾಧ್ಯಕ್ಷರಾಗಿ ವಿನುತ ರೈ ಆಯ್ಕೆಯಾದರು. ಸಮಿತಿಯ ಸದಸ್ಯರಾಗಿ ಸವಿತಾ, ಸುಮತಿ, ಲೀಲಾವತಿ, ಕಮಲ, ಕುಸುಮಾವತಿ, ಮೋಹಿನಿ, ಪುಷ್ಪಾವತಿ, ಶೀಲಾವತಿ, ಸುಜಿತ, ವರಲಕ್ಷ್ಮೀ, ಮೋಹನ, ಯುವರಾಜ, ಪ್ರಭಾಕರ, ಸುಂದರಿ ಮತ್ತು ಪಾರ್ವತಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಘು ಎನ್ ಬಿ ನೂತನ ಸಮಿತಿಯ ಸದಸ್ಯರಿಗೆ ಶುಭ ಹಾರೈಸಿ, ಶಾಲೆಯ ಅಭಿವೃದ್ಧಿಗೆ ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಪರವ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು. ಸಭೆಯ ಅಧ್ಯಕ್ಷತೆ ವಹಿಸಿರುವ ಆಡಳಿತಾಧಿಕಾರಿಗಳು ಶುಭ ಹಾರೈಸಿದರು.



ಶಾಲೆಯ ಮುಖ್ಯಶಿಕ್ಷಕ ಜಯಣ್ಣ ಎಸ್ ಇವರು ನೂತನ ಸಮಿತಿಯ ಸದಸ್ಯರನ್ನು ಅಭಿನಂದಿಸಿ, ಶಾಲೆಯ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯವೆಂದು ತಿಳಿಸಿದರು. ಸಭೆಯಲ್ಲಿ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.









