







ವಿಟ್ಲ: ಪುತ್ತೂರು ತಾಲೂಕಿನ ವಿಟ್ಲದಲ್ಲಿ ಎಸ್ಕೆಡಿಆರ್ಡಿಪಿ ಸ್ವಯಂಸೇವಕರಿಗೆ ಸಮುದಾಯ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.



ಎನ್ಡಿಆರ್ಎಫ್ 10ನೇ ಬೆಟಾಲಿಯನ್, ಬೆಂಗಳೂರು ತಂಡದ ಕಮಾಂಡರ್ ಶಾಂತಿಲಾಲ್ ಜಾಟಿಯಾ ಹಾಗೂ ಎಎಸ್ಐ ಸುಭಾಷ್ ಶಿಂಧೆ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿಪತ್ತು ನಿರ್ವಹಣೆ, ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ ಹಾಗೂ ವಿವಿಧ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮತ್ತು ಪ್ರಾಯೋಗಿಕ ತರಬೇತಿ ನೀಡಲಾಯಿತು.




ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಸುರಕ್ಷತಾ ವಿಧಾನಗಳ ಬಗ್ಗೆ ಸ್ವಯಂಸೇವಕರಿಗೆ ವಿವರಿಸಲಾಯಿತು. ಪ್ರವಾಹ ಸಂದರ್ಭದ ರಕ್ಷಣಾ ಕಾರ್ಯಾಚರಣೆ, ಗಾಯಾಳುಗಳ ನಿರ್ವಹಣೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾಯೋಗಿಕ ಪ್ರದರ್ಶನವೂ ನಡೆಯಿತು.ಕಾರ್ಯಕ್ರಮದಲ್ಲಿ ಸುಮಾರು 294 ಸ್ವಯಂಸೇವಕರು ಭಾಗವಹಿಸಿ ಪ್ರಯೋಜನ ಪಡೆದರು.










